ಜಿಲ್ಲೆ

ಪರಿತ್ಯಕ್ತ ಮಕ್ಕಳಿಗಾಗಿ ಸಾಥಿ ಆಧಾರ

 ಚಿಕ್ಕಬಳ್ಳಾಪುರ: ನಿರ್ಗತಿಕ, ಪರಿತ್ಯಕ್ತ, ಪಾಲನೆ ಪೋಷಣೆಗೆ ಅಗ್ಯತವಿರುವ ಮಕ್ಕಳನ್ನು ಗುರುತಿಸುವ ಜತೆಗೆ ಆಧಾರ್​ ಕಾರ್ಡ್​ ಮಾಡಿಸಿ ಸರ್ಕಾರಿ ಸೌಲಭ್ಯ ಒದಗಿಸುವ ಮೂಲಕ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಜಿಲ್ಲೆಯಲ್ಲಿ ಜೂ.25ರವರೆಗೂ "ಸಾಥಿ' (ಆಧಾರ್​ ಮತ್ತು ಟ್ರಾ$್ಯಕಿಂಗ್​ ಮತ್ತು ಸಮಗ್ರ ಸೇರ್ಪಡೆಗೆ ಪ್ರವೇಶಕ್ಕಾಗಿ ಸಮೀೆ) ಅಭಿಯಾನ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ವಿಶೇಷ ಸರ್ವೇ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಹಿರಿಯ ಸಿವಿಲ್​ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ ನೇತೃತ್ವದಲ್ಲಿ ಪ್ರಗತಿಯ ಗುರಿ ಸಾಧನೆಯ ಬಗ್ಗೆ ಸೋಮವಾರ ಚರ್ಚಿಸಲಾಯಿತು.

ಈಗಾಗಲೇ ಸರ್ವೇ ಚುರುಕಾಗಿ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶದಿಂದ ಸಲಹೆ ಸೂಚನೆ ನೀಡಲಾಯಿತು.

ಡಿವೈಎಸ್ಪಿ ಶಿವಕುಮಾರ್​, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೆಂಕಟೇಶರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್​ ಕುಮಾರ್​ ಮತ್ತಿತರರು ಭಾಗವಹಿಸಿದ್ದರು.

ಉಚಿತ ಸೇವೆಗೆ ಶ್ರಮ ಸಾಥಿ ಅಭಿಯಾನದ ಅಂಗವಾಗಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಟಕ, ಶಿಕ್ಷಣ, ಕಾರ್ಮಿಕ, ಪೊಲೀಸ್​, ಆರೋಗ್ಯ, ಇತರ ಇಲಾಖೆಗಳು, ವಕೀಲರು, ವಿವಿಧ ಸಂ ಸಂಸ್ಥೆಗಳು ಜೂ.26ರೊಳಗೆ ಆಧಾರ್​ ಕಾರ್ಡ್​ ಇಲ್ಲದೇ ಇರುವ ಮಕ್ಕಳನ್ನು ಗುರುತಿಸಲಿವೆ. ಆಧಾರ್​ ಜತೆಗೆ ಜನನ ದೃಢೀಕರಣ ಪತ್ರವನ್ನು ಸಹ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಉಚಿತವಾಗಿ ಮಾಡಿಸಿಕೊಡಲಿವೆ. ಈಗಾಗಲೇ ಸರ್ವೇ ಸಮಿತಿ ಸದಸ್ಯರಿಗೆ ತರಬೇತಿ ನೀಡಲಾಗಿದೆ. ಇದಕ್ಕಾಗಿ ತಂದೆ ತಾಯಿ ಇಲ್ಲದಿರುವ ನಿರ್ಗತಿಕ, ಪರಿತ್ಯಕ್ತ, ಪಾಲನೆ ಪೋಷಣೆಗೆ ಅಗ್ಯತವಿರುವ ಮಕ್ಕಳನ್ನು ಗುರುತಿಸಲಿದ್ದು, ಅಧಿಕೃತ ದಾಖಲೆಗಳ ಮೂಲಕ ಸರ್ಕಾರಿ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವುದು. ಸೂಕ್ತ ಮಾಹಿತಿ ನೀಡಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿ ಗ್ರಾಮ/ವಾರ್ಡ್​ಗಳಿಗೆ ನೋಡಲ್​ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಸರ್ವೇ ಕೈಗೊಂಡ ಸಂದರ್ಭದಲ್ಲಿ ಸಂಬಂಧಪಟ್ಟವರು ಅಗತ್ಯ ಮಾಹಿತಿ ನೀಡಬೇಕು. ಬೀದಿಗಳಲ್ಲಿರುವ ಅನಾಥ ಮಕ್ಕಳ ಬಗ್ಗೆ ತಿಳಿಸಬೇಕು. ವಿವರಗಳಿಗೆ ಟೋಲ್​ ಫ್ರೀ ಸಂಖ್ಯೆ: 1098 ಇಲ್ಲವೇ 112ಕ್ಕೆ ಕರೆ ಮಾಡಬಹುದು ಎಂದು ಪ್ರಾಧಿಕಾರ ಮನವಿ ಮಾಡಿದೆ. ಕಾಲನಿಗೆ ಭೇಟಿ ಹಿರಿಯ ಸಿವಿಲ್​ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪಾ ಸಾಥಿ ಸರ್ವೇ ಅಭಿಯಾನಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕಂದವಾರ ಗ್ರಾಮದ ಬೃಂದಾವನ ಕಾಲನಿಗೆ ಭೇಟಿ ನೀಡಿ ಸಮೀೆಯ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೇ 26ರಿಂದ ಜೂ.25 ರವರೆಗೆ ಸಾಥಿ ಸಮೀೆ ನಡೆಯುತ್ತಿದೆ. ಇದಕ್ಕೆ ಅಗತ್ಯ ಮಾಹಿತಿ ನೀಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು. > ಬಿ.ಶಿಲ್ಪಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಚಿಕ್ಕಬಳ್ಳಾಪುರ