ಜಿಲ್ಲೆ

ಕಾಲುವೆಯಲ್ಲಿ ಕೊಳವೆ ಬಾವಿ? ಬಳ್ಳಾರಿಯಲ್ಲಿ 84 ಮಂದಿಗೆ ವಾಂತಿ ಭೇದಿ! ಹೆಚ್ಚುತ್ತಲೇ ಇದೆ ಕೇಸ್​...

suchetana

ಬಳ್ಳಾರಿ: ಬಳ್ಳಾರಿಯ ಸಂಡೂರು ತಾಲೂಕಿನ ಅಂಕಮನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥ ಪ್ರಕರಣ ಕೆಲ ದಿನಗಳಿಂದ ನಡೆಯುತ್ತಿದ್ದು, ಇದೀಗ ಅಸ್ವಸ್ಥರ ಸಂಖ್ಯೆ 84ಕ್ಕೆ ಏರಿದೆ.

ನಿನ್ನೆ ಸಂಜೆ ವೇಳೆಗೆ 49 ಜನರಿಗೆ ಕಾಣಿಕೊಂಡಿದ್ದ ವಾಂತಿ ಭೇದಿ ಇದೀಗ 84ಕ್ಕೆ ಏರಿಕೆಯಾಗಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ.

ವಾಂತಿ ಭೇದಿ ಪ್ರಕರಣ ಹೆಚ್ಚಳ ಹಿನ್ನೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ತಪಾಸಣೆ ಕಾರ್ಯ ಕೈಗೊಂಡಿದ್ದಾರೆ. ಕಾಲುವೆಯಲ್ಲಿ ಕೊಳವೆ ಬಾವಿ ಹಾಕಿಸಿರುವುದು ಈ ಆವಾಂತರಕ್ಕೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ.

ಅಸ್ವಸ್ಥ ಜನರಿಗೆ ಅಂಕಮನಾಳ ಗ್ರಾಮದ ತಾತ್ಕಾಲಿಕ ಆಸ್ಪತ್ರೆ, ಸಂಡೂರು ತಾಲೂಕಾಸ್ಪತ್ರೆ, ಬಳ್ಳಾರಿ ವಿಮ್ಸ್ ಸೇರಿದಂತೆ ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗ್ರಾಮದ ಜನರು ನಲುಗಿ ಹೋಗಿದ್ದಾರೆ (ದಿಗ್ವಿಜಯ ನ್ಯೂಸ್​)