ಬೆಂಗಳೂರು: ಕರೊನಾ ನಿರೋಧಕ ಲಸಿಕೆಯನ್ನು 18-44ರ ವಯೋಮಿತಿಯವರಿಗೆ ನಾಳೆಯಿಂದ ಹಾಕಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ 1.90 ಲಕ್ಷ ಜನರಿಗೆ ಬಾಕಿಯಿದ್ದು, ಲಭ್ಯತೆ ಅನುಸಾರ ವಿತರಿಸಲಾಗುವುದು ಎಂದರು.
ಬ್ಲ್ಯಾಕ್ ಫಂಗಸ್ ರೋಗಕ್ಕೆ ನಿರ್ದಿಷ್ಟವಾಗಿ ಲಿಪಿಸೋಮಲ್ ಆಂಫೋಟೆರಿಸಿನ್ ಬಿ ಇಂಜೆಕ್ಷನ್ ಕೊರತೆಯಿದೆ. ಆದರೆ ಈ ಸೋಂಕಿಗೆ ಪರ್ಯಾಯ ಔಷಧ ಹಾಗೂ ಮಾತ್ರೆಗಳಿವೆ. ಕರೊನಾ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಕಾಲಿಕ ನೆರವು, ಸಹಕಾರದಿಂದ ಪರಿಸ್ಥಿತಿ ಕೈಮೀರದಂತೆ ನಿಭಾಯಿಸಲು ಸಾಧ್ಯವಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.