ಜಿಲ್ಲೆ

ಎಸ್.ವಿ. ಆಂಗ್ಲ ಮಧ್ಯಮ ಶಾಲೆ ಚುನಾವಣೆ

ಇಂದಿರಾ ಎನ್ ಕೆ

ಕುಂದಾಪುರ: ಗಂಗೊಳ್ಳಿಯ ಎಸ್‌ವಿ ಆಂಗ್ಲ ಮಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಪರಿಕಲ್ಪನೆ, ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ 2025-26ನೇ ಸಾಲಿನ ವಿದ್ಯಾರ್ಥಿ ನಾಯಕ, ಉಪನಾಯಕರ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಸಲಾಯಿತು.

ಪ್ರೌಢ ಮತ್ತು ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ನಾಯಕ, ಉಪನಾಯಕನ ಆಯ್ಕೆಗೆ ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸಿದರು. ಮತದಾನ ಮುಕ್ತಾಯದ ಬಳಿಕ ಮತಗಟ್ಟೆ ಅಧಿಕಾರಿಗಳು ಮುಖ್ಯಶಿಕ್ಷಕ ರಾಘವೇಂದ್ರ ಶೇರುಗಾರ್, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶಾಂತಿ ಡಿಕೋಸ್ಟ ಸಮ್ಮುಖದಲ್ಲಿ ಮತ ಎಣಿಕೆ ನಡೆಸಿದರು.

ಪ್ರೌಢಶಾಲಾ ವಿಭಾಗದಲ್ಲಿ ದಿವ್ಯಶ್ರೀ ಆಚಾರ್ಯ, ಸುಜಾತ, ಸಂಗೀತ, ಉಷಾ, ಜಯಶ್ರೀ ನಾಯಕ್, ಲಕ್ಷ್ಮೀ, ಸಂಧ್ಯಾ, ಶ್ರೀಪತಿ ಭಟ್, ಸೂರಜ್ ಸಾರಂಗ್ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿ ಕಾರ್ತಿಕ್, ಉಪನಾಯಕನಾಗಿ 9ನೇ ತರಗತಿ ಆರ್ಯನ್ ವಿ.ಕೆ. ಆಯ್ಕೆಯಾದರು. ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ನಾಯಕನಾಗಿ 7ನೇ ತರಗತಿ ವಿಮರ್ಶ್ ವಿ.ಶೆಣೈ, ಉಪನಾಯಕನಾಗಿ 6ನೇ ತರಗತಿ ಅಭಿಷೇಕ್ ಶೆಣೈ ಆಯ್ಕೆಯಾದರು. ಶಾಲಾ ವಿದ್ಯಾರ್ಥಿ ನಾಯಕ, ಉಪನಾಯಕಿಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಭೋದಕ-ಭೋದಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.