ಜಿಲ್ಲೆ

ತುಮಕೂರು ಟು ಬೆಂಗಳೂರು- ಹೆಲಿಕಾಪ್ಟರ್​ನಲ್ಲಿ​ ಮದುಮಗನ ಭರ್ಜರಿ ಎಂಟ್ರಿ...

ಆನೇಕಲ್: ಕರೊನಾ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ಭರ್ಜರಿ ಮದುವೆಗಳಿಗೆ ಬ್ರೇಕ್​ ಬಿದ್ದು ತಿಂಗಳುಗಳೇ ಕಳೆದಿವೆ. ಇದರ ನಡುವೆಯೂ ರಾಜಕಾರಣಿಗಳು ಭರ್ಜರಿಯಾಗಿ, ಕೆಲವೊಮ್ಮೆ ಕೋವಿಡ್​ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಕುಟುಂಬದವರ ಮದುವೆ ಮಾಡುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿವೆ.

ಹಾಗೆಯೇ, ಇಲ್ಲೊಂದು ಮದುವೆ ಇದೀಗ ಭಾರಿ ಸುದ್ದಿ ಮಾಡಿದೆ. ಅದಕ್ಕೆ ಕಾರಣ, ಮದುಮಗಕೊಟ್ಟ ಭರ್ಜರಿ ಎಂಟ್ರಿ. ತುಮಕೂರಿನ ಬಲರಾಮ್ ಶೆಟ್ಟಿ ಮತ್ತು ರಮಾದೇವಿ ಅವರ ಪುತ್ರ ಉದ್ಯಮಿ ನಿರೂಪ್ ಈ ಮದುಮಗ. ಇವರ ಮದುವೆ ಇಂದು ಬೆಂಗಳೂರಿನ ತಲಘಟ್ಟಪುರದಲ್ಲಿರುವ ಬಿಆರ್​ಎಸ್ ಗ್ರಾಂಡ್ಯುರ್​ನಲ್ಲಿ ಗ್ರ್ಯಾಂಡ್​ ಆಗಿ ನಡೆಯಲಿದೆ. ಬೆಂಗಳೂರಿನ ಐಶ್ವರ್ಯಾ ಜತೆ ಇವರ ವಿವಾಹ ನಡೆಯಲಿದೆ.

ಇದಕ್ಕಾಗಿ ಅನುಪ್​ ಅವರು ಕುಟುಂಬ ಸಹಿತ ಹೆಲಿಕಾಪ್ಟರ್​ನಲ್ಲಿ ಕಲ್ಯಾಣಮಂಟಪಕ್ಕೆ ಬಂದಿದ್ದಾರೆ. ತುಮಕೂರಿನಿಂದ ಹೆಲಿಕಾಪ್ಟರ್​ನಲ್ಲಿ ಕಲ್ಯಾಣಮಂಟಪಕ್ಕೆ ಈ ರೀತಿಯಾಗಿ ವಿಶೇಷವಾಗಿ ಬರುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇದೊಂದು ರೀತಿಯಲ್ಲಿ ಹೊಸ ಅನುಭವ ಕೊಟ್ಟಿದೆ ಎಂದು ಅನೂಪ್​ ಹೇಳಿದ್ದಾರೆ.

ಆದರೆ ಈ ನಡುವೆಯೇ ಅವರ ಜತೆಯಲ್ಲಿ ಬಂದವರಲ್ಲಿ ಹಲವರು ಮಾಸ್ಕ್​ ಧರಿಸದೇ ಇರುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವ ಬಗ್ಗೆ ಇದಾಗಲೇ ಟೀಕೆಗಳೂ ಶುರುವಾಗಿದೆ.