ಜಿಲ್ಲೆ

ಸಂಚಾರಿ ನಿಯಮ ಉಲ್ಲಂಘನೆ: ಒಂದೇ ಪ್ರದೇಶದಲ್ಲಿ ಒಂದೇ ದಿನದಲ್ಲಿ 1,02,500 ದಂಡ ಸಂಗ್ರಹ!

suchetana

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಂಡ ವಸೂಲಿ ಮಾಡುವುದು ಟ್ರಾಫಿಕ್ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಇದರ ನಡುವೆ ಕಾಮಾಕ್ಷಿ ಪಾಳ್ಯ ಸಂಚಾರ ಠಾಣೆ ಸಬ್ ಇನ್ಸ್ಪೆಕ್ಟರ್ ಎಂ. ಶಿವಣ್ಣ ಅವರು ಒಂದೇ ದಿನ 1,02,500 ರೂ. ದಂಡ ವಸೂಲಿ ಮಾಡಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿರುವ ವಾಹನಗಳ ಮಾಲೀಕರು ದಂಡ ಪಾವತಿ ಮಾಡದೆ ಓಡಾಡುತ್ತಿರುವುದನ್ನು ಪತ್ತೆ ಮಾಡಿ ದಂಡ ವಸೂಲಿ ಮಾಡಿದ್ದಾರೆ. ಇದರಲ್ಲಿ ಹೆಚ್ಚಾಗಿ ಹೆಲ್ಮೆಟ್ ರಹಿತ ಚಾಲನೆ, ಮೊಬೈಲ್ ಬಳಕೆ ಹೆಚ್ಚಾಗಿವೆ. ಲಂಚದ ಆರೋಪ‌ ಬರದಂತೆ ಪಾರದರ್ಶಕತೆ ಕಾಪಾಡಲು ಬಾಂಡಿ ವಾಮ್೯ ಕ್ಯಾಮರಾ ಅಳವಡಿಸಿಕೊಂಡು ದಂಡ ವಸೂಲಿ ಮಾಡಿದ್ದಾರೆ.

ಬಹುತೇಕ ಹಳೆಯ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳು ಪಿಎಸ್ಐ ಎಂ. ಶಿವಣ್ಣ ಅವರ ಕರ್ತವ್ಯವನ್ನು ಶ್ಲಾಘಿಸಿದ್ದಾರೆ.