ಪ್ರಶಸ್ತಿ ವಿಜೇತರಾದ ಕೃಷ್ಣ ಮತ್ತು ಮೇಘಾ 
ಜಿಲ್ಲೆ

ಬೆಂಗಳೂರು, ಉಡುಪಿ, ಧಾರವಾಡದ ಮೂವರು ಸೇರಿ ಎಂಟು ಪ್ರತಿಭಾನ್ವಿತರಿಗೆ ಟೊಟೊ ವಾರ್ಷಿಕ ಪ್ರಶಸ್ತಿ

suchetana

ಬೆಂಗಳೂರು: ಟೊಟೊ ಫಂಡ್ಸ್‌ನ ಆರ್ಟ್ಸ್ (ಟಿಎಫ್‌ಎ) ತನ್ನ 18ನೇ ವಾರ್ಷಿಕ ಟೊಟೊ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕರ್ನಾಟಕದ ಮೂವರು ಕಲಾವಿದರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ವಿಜೇತರ ವಿವರ ಇಂತಿದೆ.

ಸಂಗೀತ: ರಂಜನಿ ರಾಮದಾಸ್ (ರಂಜ್), ಬೆಂಗಳೂರು- ಪ್ರಶಸ್ತಿ ಮೊತ್ತ ರೂ. 60 ಸಾವಿರ; ಕನ್ನಡದಲ್ಲಿ ಸೃಜನಾತ್ಮಕ ಬರವಣಿಗೆ: ಕೃಷ್ಣ ದೇವಾಂಗಮಠ, ಧಾರವಾಡ- ಪ್ರಶಸ್ತಿ ಮೊತ್ತ ರೂ. 50 ಸಾವಿರ; ಕಿರುಚಿತ್ರ: ಮೇಘಾ ಜೆ. ಶೆಟ್ಟಿ, ಉಡುಪಿ ಮತ್ತು ಶುಭಂ ದಿಲೀಪ್ ಘಾಟಗೆ, ಪುಣೆ- ತಲಾ ರೂ. 50 ಸಾವಿರ.

ಇಂಗ್ಲಿಷ್‌ನಲ್ಲಿ ಸೃಜನಾತ್ಮಕ ಬರವಣಿಗೆ: ಅಶ್ವಿನ್ ವಿಜಯನ್, ಕೋಯಿಕ್ಕೋಡ್ ಮತ್ತು ಉದಯ ಕನುಂಗೋ, ಭುವನೇಶ್ವರ- ಪ್ರಶಸ್ತಿ ಮೊತ್ತ ತಲಾ ರೂ. 50 ಸಾವಿರ; ಫೋಟೋಗ್ರಫಿ: ಫಾರ್ಹೀನ್ ಫಾತಿಮಾ, ಚಂಡೀಗಢ ಮತ್ತು ಪ್ರಕಾಶ್ ಭೂಯಾನ್, ಗುವಾಹತಿ- ತಲಾ ರೂ. 50 ಸಾವಿರ.

ಟಿಎಫ್‌ಎ ಸಂಸ್ಥೆ ದೇಶದ 30 ವರ್ಷದೊಳಗಿನ ಯುವ ಕಲಾವಿದರನ್ನು ತನ್ನ ಪ್ರಶಸ್ತಿಗಳು, ಕಾರ್ಯಾಗಾರಗಳು, ಉಪನ್ಯಾಸಗಳು, ಸಾಹಿತ್ಯ ಸಮಾವೇಶಗಳ ಮೂಲಕ ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಕಳೆದ 18 ವರ್ಷಗಳಿಂದ ಮಾಡುತ್ತಿದೆ.