ಜಿಲ್ಲೆ

ಅಮೃತ್​ ಚಿಕಿತ್ಸೆಯಿಂದ ಖ್ಯಾತಿ ಪಡೆದ ಟೆಂಪಲ್​ ಆಫ್​ ಸಕ್ಸಸ್​​ನ ರಘುನಾಥ್​ ಗುರೂಜಿ ವಿಧಿವಶ- ನಾಳೆ ಅಂತ್ಯಕ್ರಿಯೆ

ಬೆಂಗಳೂರು: ಬೆಂಗಳೂರಿನ ಟೆಂಪಲ್ ಆಫ್ ಸಕ್ಸಸ್ ವ್ಯವಸ್ಥಾಪಕ ಸಾಯಿದತ್ತ ರಘುನಾಥ್ ಗುರೂಜಿ ವಿಧಿವಶರಾಗಿದ್ದಾರೆ. ಇವರು ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಮಂಗಳವಾರ (ಅ.30) ಗುರೂಜಿ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರು ಬಸವನಗುಡಿಯ ವಾಣಿ ನಿಲಾಸ ರಸ್ತೆಯಲ್ಲಿರುವ ಟೆಂಪಲ್ ಆಫ್ ಸಕ್ಸಸ್ ಬಳಿ ಇಂದು (ಸೆ.1) ಗುರೂಜಿಯವರ ಅಂತಿಮ ದರ್ಶನ ಪಡೆಯಬಹುದು. ನಾಳೆ (ಸೆ.2) ಮಣಿಪಾಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲೆಯ ಮುಗುತ್ತಿ ಮೂಲದ ಗುರೂಜಿಯವರು ವಿಶ್ವದಾದ್ಯಂತ ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ. ಯುವಕರಾಗಿದ್ದಾಗ ನಾಲ್ಕು ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದ ಸ್ವಾಮೀಜಿಯವರು ಅಮೃತ್ ಎನ್ನುವ ಚಿಕಿತ್ಸೆ ಮೂಲಕ ಖುದ್ದು ಪರಿಹಾರ ಕಂಡುಕೊಂಡಿದ್ದರು. ಸುಮಾರು ಆರು ವರ್ಷಗಳ ಕಾಲ ಕಾಡಿದ ನೋವನ್ನು ನಾಲ್ಕೇ ತಿಂಗಳಿನಲ್ಲಿ ಗುಣಪಡಿಸಿಕೊಂಡರು. ತಮಗಾದ ಈ ಚಮತ್ಕಾರವನ್ನು ಜನರಿಗೂ ನೀಡುವ ನಿಟ್ಟಿನಲ್ಲಿ ಈ ಹಳೆಯ ಚಿಕಿತ್ಸಾ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಲು ಇಚ್ಛಿಸಿದ ಅವರು, ಅಮೃತ್ ಚಿಕಿತ್ಸೆ ಎಂಬ ಚಿಕಿತ್ಸೆಯನ್ನು ನೀಡುವ ಮೂಲಕ ಎಷ್ಟೋ ಜನರ ಜೀವವನ್ನು ಕಾಪಾಡಿದ್ದಾರೆ.

1999 ರಲ್ಲಿ ಬೆಂಗಳೂರಿನಲ್ಲಿ ಟೆಂಪಲ್ ಆಫ್ ಸಕ್ಸೆಸ್ ಪ್ರಾರಂಭಿಸಿದರು. ಅಂದಿನಿಂದ ಇದು ನಿರ್ಗತಿಕರಿಗೆ ಸಹಾಯ ಮಾಡುವ ಸಂಸ್ಥೆಯಾಗಿದೆ ರೂಪುಗೊಂಡಿದೆ. ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಯಿಂದ ಹಿಡಿದು ಕ್ಯಾನ್ಸರ್​ನಂಥ ರೋಗಕ್ಕೂ ಇದೇ ಚಿಕಿತ್ಸಾ ವಿಧಾನದಿಂದ ಗುಣಮುಖ ಮಾಡುವಲ್ಲಿ ಇದು ಯಶಸ್ವಿಯಾಗಿದೆ. ಮಾನಸಿಕ ಸಮಸ್ಯೆಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ (ಏಜೆನ್ಸೀಸ್​)