ಜಿಲ್ಲೆ

ಸಿನಿಮಾದಲ್ಲಿ ರೋಹಿಣಿ ಸಿಂಧೂರಿ! ಲಾಕ್‌ಡೌನ್‌ ನಂತರ ಸೆಟ್ಟೇರಲಿದೆ ಬಯೋಪಿಕ್‌ ‘ಭಾರತ ಸಿಂಧೂರಿ’

suchetana

ಮಂಡ್ಯ: ಕಳೆದ ಕೆಲ ದಿನಗಳಿಂದ ಭಾರಿ ಸುದ್ದಿಯಲ್ಲಿರುವ ಮೈಸೂರು ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಾಲಿ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ ಅವರ ಬಯೋಪಿಕ್‌ ಸಿನಿಮಾ ಆಗಲಿದೆ.

ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಆಗಿದ್ದು, ರೋಹಿಣಿ ಸಿಂಧೂರಿ ಇಲ್ಲಿ ‘ಭಾರತ ಸಿಂಧೂರಿ’ಯಾಗಿದ್ದಾರೆ. ಈ ಟೈಟಲ್‌ ರೆಜಿಸ್ಟರ್‌ ಆಗಿದ್ದು ಕಳೆದ ವರ್ಷ ಅಂದರೆ 2020ರ ಜೂನ್ 15ರಂದೇ.

ಮಂಡ್ಯದ ಪತ್ರಕರ್ತರಾಗಿರುವ ಕೃಷ್ಣ ಸ್ವರ್ಣಸಂದ್ರ ಎಂಬುವವರಿಂದ ಟೈಟಲ್ ನೋಂದಣಿಯಾಗಿದ್ದು, ಲಾಕ್‌ಡೌನ್‌ ನಂತರ ಸಿನಿಮಾ ನಂತರ ಸೆಟ್ಟೇರಲಿರುವ ನಿರೀಕ್ಷೆ ಇದೆ. ಇದಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಕೃಷ್ಣ ಸ್ವರ್ಣಸಂದ್ರ ಅವರು ಹೊತ್ತಿದ್ದಾರೆ.


ಸಿಂಧೂರಿ ಪಾತ್ರಕ್ಕೆ ಅಕ್ಷತಾ ಪಾಂಡವಪುರ ಆಯ್ಕೆ ಮಾಡಲಾಗಿದ್ದು, ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ಮಾಹಿತಿ ನೀಡಿದ್ದಾರೆ. ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.