ಜಿಲ್ಲೆ

ಮೈಸೂರು: ರಿಮೋಟ್‌ ಕಂಟ್ರೋಲ್‌ ಸೆಲ್‌ ನುಂಗಿ ಮಗು ಸಾವು

suchetana

ಮೈಸೂರು: ಮನೆಯಲ್ಲಿ ಚಿಕ್ಕಮಕ್ಕಳು ಇದ್ದರೆ ಅವರ ಬಗ್ಗೆ ಎಷ್ಟು ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಸ್ವಲ್ಪ ಹೆಚ್ಚೂ ಕಡಿಮೆ ಆದರೆ ಅಪಾಯ ಕಟ್ಟಿಟ್ಟದ್ದೇ.

ಅಂಥದ್ದೇ ಒಂದು ದುರ್ಘಟನೆ ಮೈಸೂರಿನಲ್ಲಿ ನಡೆದಿದೆ. ಟಿ.ವಿಯ ರಿಮೋಟ್‌ ಕಂಟ್ರೋಲ್‌ಗೆ ಬಳಸುವ ಸೆಲ್‌ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಮೈಸೂರಿನ ಇಟ್ಟಿಗೆಗೂಡಿನಲ್ಲಿ ನಡೆದಿದೆ.

ಹೇಮಂತ್ ಸ್ಕಂದಮಣಿರಾಜ್ ಎನ್ನುವ ಮಗು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಗಸ್ಟ್ 31ರಂದು ಮನೆಯಲ್ಲಿ ಮಗು ಆಟವಾಡುತ್ತಿತ್ತು. ಟಿ.ವಿಯ ರಿಮೋಟ್‌ ಕಂಟ್ರೋಲ್‌ಗೆ ಹಾಕುವ ಸಲುವಾಗಿ ಎತ್ತಿಟ್ಟಿದ್ದ ಸೆಲ್‌ ಮಗುವಿನ ಕೈಗೆ ಸಿಕ್ಕಿದೆ. ಅದರಿಂದ ಆಟವಾಡುತ್ತಿದ್ದ ಮಗು, ಬಾಯಲ್ಲಿ ಹಾಕಿಕೊಂಡು ನುಂಗಿಬಿಟ್ಟಿದೆ.

ಅದೇ ದಿನ ಪಾಲಕರು ಮಗುವನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಗು ಮೃತಪಟ್ಟಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.