ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಸಂಡೂರಿನ ಆದರ್ಶ ಸಮುದಾಯ ಕೇಂದ್ರದಲ್ಲಿ ಸೆ.04ರಂದು ಗಣಿ ಭಾದಿತ ಜನರ ಬದುಕು ಮತ್ತು ಪರಿಸರ ಪುನಶ್ಚೇತನ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಮೂರು ಗೋಷ್ಠಿಗಳು ನಡೆಯಲಿವೆ. ಹಲವು ವಿಷಯಗಳನ್ನು ಚರ್ಚೆ ಮಾಡುತ್ತೆವೆ. ನಮಗೆ ಬೇಡವಾದುದನ್ನು ವಿರೋಧಿಸುವ ಜತೆಗೆ ನಮಗೆ ಬೇಕಾದುದರ ಬಗ್ಗೆ ಹೋರಾಟ ನಡೆಸಬೇಕು. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಮಾತ್ರ ನ್ಯಾಯಯುತ, ಮಾನವೀಯ ಸಮಾಜ ನಿರ್ಮಾಣ ಸಾಧ್ಯ. ಕಾಯಿದೆಗಳಿದ್ದರೆ ಸಾಲು ಮಾನಸಿಕತೆ ಬದಲಾಗಬೇಕು. ದುರಾಸೆ ಬೆಳೆದು ನೈತಿಕತೆ ಕುಸಿಯುತ್ತಿರುವುದರಿಂದ ಜನಜೀವನ ದುಸ್ತರಗೊಂಡಿದೆ ಎಂದರು.
ಪ್ರಜಾಪ್ರಭುತ್ವ ಸಶಕ್ತಿಕರಣ ಮತ್ತು ಸಮಗ್ರವಾದದಿಂದ ಗಣಿಗಾರಿಕೆಯ ಗಂಭೀರ ಸಮಸ್ಯೆ ಎದುರಿಸಲು ಸಾಧ್ಯ. ಇದೇ ದೃಷ್ಟಿಕೋನದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಇದಕ್ಕೆ ಪ್ರಬಲ ಜನಾಂದೋಲನದ ಅವಶ್ಯಕತೆ ಇದೆ. ಪರಿಸರ, ಸೂಕ್ಷ್ಮಸಮತೋಲಿತ ಪರಿಸರವನ್ನು ಅಲ್ಲೋಲ ಕಲ್ಲೋಲ ಮಾಡಲಾಗುತ್ತಿದೆ. ವಯನಾಡು ಸೇರಿ ನಾನಾ ಕಡೆ ಅವಘಡಗಳೇ ಇದಕ್ಕೆ ಸಾಕ್ಷಿ. ಇದನ್ನು ಸಮಗ್ರ ಪರಿಕಲ್ಪನೆ ಅವಲೋಕನ ಮಾಡಬೇಕಿದೆ. ಜನರೇ ಗೌರವಯುತ ಜೀವನ ಮಾಡಬೇಕಾದರೆ ಪ್ರಜಾಪ್ರಭುತ್ವ ಸಶಕ್ತಿಕರಣ ಮತ್ತು ಸಮಗ್ರ ಪರಿಕಲ್ಪನೆಯಿಂದ, ಪ್ರಜಾಂದೋಲನದಿAದ ಸಾಧ್ಯ ಎಂದರು.
ಜಿAದಾಲ್‌ಗೆ ಭೂಮಿ ಕೊಡುವುದಕ್ಕಿಂತ ಘೋರ ಅನ್ಯಾಯ ಮಾತ್ತೊಂದೇನಿದೆ. ಕಾಂಗ್ರೆಸ್ ಸರ್ಕಾರ ಮಾಡಿದ ಜನದ್ರೋಹಿ ನಡೆ ಇದು. ಅಧಿಕಾರ ಇದ್ದಾಗ ಮತ್ತು ಇಲ್ಲದಾಗ ಯಾವ ರೀತಿ ನಡೆದುಕೊಳ್ಳುತ್ತಾರೆ. ಸರ್ಕಾರ ಇದ್ದಾಗಲೂ ವ್ಯವಸ್ಥಿತವಾಗಿ ಪ್ರತಿಭಟನೆ ಮಾಡಿದ್ದಾರೆ. ರಾಜಕೀಯ ನೈತಿಕತೆ ಕೆಳಗಿಳಿದಿದೆ. ಜನರು, ಸಂವಿಧಾನದ ಬಗ್ಗೆ ಸ್ವಾಂತತ್ರ‍್ಯ ಸಮಾನತೆ ಭಾತೃತ್ವ ಯಾರಿಗೂ ಬೇಕಿಲ್ಲ ಎಂದು ಕಿಡಿ ಕಾರಿದರು.
ಮಲ್ಲಿಕಾರ್ಜುನ, ಹೈದರ್ ಇದ್ದರು.