ಜಿಲ್ಲೆ

ಗೋಕುಲದಲ್ಲಿ ಬೊಮ್ಮಾಯಿ ಜನ್ಮದಿನಾಚರಣೆ

Dharwada - Basavaraj Idli

ಹುಬ್ಬಳ್ಳಿ: ತಾಲೂಕಿನ ಗೋಕುಲ ಎಸ್.ಆರ್. ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆಯಲ್ಲಿ ಭೂದಾನಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರ 101ನೇ ಜನ್ಮದಿನ ಆಚರಿಸಲಾಯಿತು.

ಗ್ರಾಮದ ಹಿರಿಯ ಬಸಪ್ಪ ಉಣಕಲ್ಲ ಮಾತನಾಡಿ, ಬೊಮ್ಮಾಯಿ ಅವರ ಒಡನಾಟ ಸ್ಮರಿಸಿದರು. ಶಿಕ್ಷಣ ಪ್ರೇಮಿಗಳಾಗಿದ್ದ ಅವರು ನಡೆದು ಬಂದ ಹಾದಿ ವಿವರಿಸಿದರು. ಸಣ್ಣ ಗ್ರಾಮದಿಂದ ಬಂದು ಹೋರಾಟದ ಮೂಲಕ ರಾಷ್ಟ್ರ ನಾಯಕರಾಗಿ ಬೆಳೆದರು. ಎಲ್ಲರಿಗೂ ಆದರ್ಶರಾಗಿ ಅಧಿಕಾರ ನಡೆಸಿದರು. ಕರ್ನಾಟಕ ಏಕೀಕರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು ಎಂದರು.

ಗ್ರಾಮದ ಹಿರಿಯರು, ಮುಖ್ಯಾಧ್ಯಾಪಕರು, ಶಿಕ್ಷಕರು, ವಿದ್ಯಾಥಿರ್ಗಳು ಇದ್ದರು. ಶಿವಾನಂದ ಬಾವಿಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ತಿವಾರಿ ವಂದಿಸಿದರು.