ಜಿಲ್ಲೆ

ಪುನೀತ್‌ ಅಂತಿಮಯಾತ್ರೆಗೆ ಬಿಗಿ ಬಂದೋಬಸ್ತ್‌; ಈ ದಾರಿಗಳಲ್ಲಿ ಸಾಗಲಿವೆ ಪಾರ್ಥಿವ ಶರೀರ- ವಾಹನ ಸಂಚಾರಕ್ಕೆ ನಿರ್ಬಂಧ

ಬೆಂಗಳೂರು: ಎರಡು ದಿನಗಳ ಹಿಂದೆ ನಿಧನರಾದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಅಂತಿಮಯಾತ್ರೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ಅಂತಿಮಯಾತ್ರೆ ಸಾಗಲಿರುವ ಪ್ರತಿ ಜಂಕ್ಷನ್ ನಲ್ಲಿ ಪೊಲೀಸರ ಬಿಗಿ‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಅಂತಿಮ ಯಾತ್ರೆಯೊಂದಿಗೆ ಖುದ್ದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಜರು ಇರಲಿದ್ದಾರೆ. ಮೆರವಣಿಗೆ ಸಾಗಲಿರುವ ರಸ್ತೆಯಲ್ಲಿ ಸಾರ್ವಜನಿಕರ ವಾಹನಕ್ಕೆ ನಿರ್ಬಂಧ ವಿಧಿಸಲಾಗಿದೆ. ಪರ್ಯಾಯವಾದ ಅಕ್ಕಪಕ್ಕದ ರಸ್ತೆಗಳಲ್ಲಿ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಭದ್ರತೆಯಲ್ಲಿ‌ ನಗರದ ಎಲ್ಲಾ ಡಿಸಿಪಿಗಳ ನಿಯೋಜನೆ ಮಾಡಲಾಗಿದೆ.

15 ರಿಂದ 20 ಸಾವಿರ ಪೊಲೀಸರು ಜಂಕ್ಷನ್‌ಗಳಲ್ಲಿ, ಪ್ರತಿ ರಸ್ತೆಯ ಎರಡೂ ಕಡೆ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಮೆರವಣಿಗೆಯ ವಾಹನದೊಂದಿಗೆ ಆರ್ಮ್ಡ್‌ ರಿಸರ್ವ್ ಫೋರ್ಸ್ ಸಾಗಲಿದ್ದು, ರಿಂಗ್ ರಸ್ತೆಯಲ್ಲಿರುವ ಕಂಠೀರವ ಸ್ಟುಡಿಯೋ 2-3 ಕಿ.ಮೀ ವ್ಯಾಪ್ತಿಯಿಂದಲೇ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.

ಪುನೀತ್‌ ಪಾರ್ಥಿವ ಶರೀರ ಸಾಗಲಿರುವ ರಸ್ತೆಗಳು ಇವು: