ಜಿಲ್ಲೆ

ಪ್ರವೀಣ್ ಹತ್ಯೆ ಪ್ರಕರಣ, ಗೃಹ ಸಚಿವ ಆರಗ ಜ್ಞಾನೇಂದ್ರರಿಂದ ಪ್ರತಿ ಕ್ಷಣದ ಮಾಹಿತಿ ಸಂಗ್ರಹ

suchetana

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ‌ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ‌ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ಷಣದ ಮಾಹಿತಿ ತರಿಸಿಕೊಳ್ಳುತ್ತಿದ್ದಾರೆ.

ಸರ್ಕಾರದ ಸಾಧನೆಗಳನ್ನು ವಿವರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು‌ ವಿಧಾನಸೌಧದಲ್ಲಿ ಬೆಳಗ್ಗೆ 11ಕ್ಕೆ ಸುದ್ದಿಗೋಷ್ಠಿ‌ ಕರೆದಿದ್ದು, ಅದಕ್ಕೂ ಮುನ್ನ ಭೇಟಿಯಾಗಿ ತನಿಖಾ ಪ್ರಗತಿ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಹತ್ಯೆ ಪ್ರಕರಣದ ತನಿಖೆ ಮೇಲೆ ತೀವ್ರ ನಿಗಾವಹಿಸಿ:

ಪ್ರತಿ ಒಂದು ಗಂಟೆಗೊಮ್ಮೆ ಪ್ರಕರಣದ ಹೆಚ್ಚುವರಿ ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಗಳನ್ನು ಟ್ರಾಕ್ ಮಾಡುತ್ತಿರುವುದಾಗಿ ಡಿಜಿಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ ಎಂದು ತಿಳಿದಿದೆ.

ಹತ್ಯೆ ಬಳಿಕ ಆರೋಪಿಗಳು ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಅವರನ್ನು ಸೆರೆಹಿಡಿಯುವ ವಿಚಾರವಾಗಿ ಕೇರಳ ಡಿಜಿಐಜಿಪಿ ಜತೆಗೆ ಮಾತುಕತೆ ನಡೆದಿದೆ ಎಂಬ ವಿವರಣೆ ಪ್ರವೀಣ್ ಸೂದ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಅಪ್ಡೇಟ್‌ಗಳನ್ನು ತ್ವರಿತವಾಗಿ ನೀಡುವಂತೆ ಸೂಚಿಸಿ, ಫೋನ್ ಮೂಲಕ ಅಧಿಕಾರಿಗಳಿಂದ ಆರಗ ಜ್ಞಾನೇಂದ್ರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.