ಜಿಲ್ಲೆ

ಸೇವೆಯಿಂದ ನಿವೃತ್ತಿ ಹೊಂದುವ ದಿನವೇ ವಿಧಿಯಾಟ ನೋಡಿ: ಸೋಂಕಿಗೆ ಬಲಿಯಾದ ಕರೊನಾ ವಾರಿಯರ್‌

suchetana

ಹೊಸಪೇಟೆ: ಕರೊನಾ ವಾರಿಯಾರ್‌ ಆಗಿ ಸೇವೆ ಸಲ್ಲಿಸಿದ್ದ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಯಲ್ಲಪ್ಪ ಕದ್ರಳ್ಳಿ (60) ಇಂದು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಯಲ್ಲಪ್ಪ ಅವರು ಇಂದು ಸೇವೆಯಿಂದ ನಿವೃತ್ತರಾಗುವ ದಿನ. ಅಂದೇ ಸೋಂಕು ಅವರನ್ನು ಬಲಿಪಡೆದಿರುವ ಘಟನೆ ಇದಾಗಿದೆ. ಕೆಲ ದಿನಗಳಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದ ಯಲ್ಲಪ್ಪ ಅವರು 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೊಪ್ಪಳದ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆ ಹೇಳಿದೆ. ಕಳೆದ 38 ವರ್ಷಗಳಿಂದ ಸೇವೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.