ಜಿಲ್ಲೆ

ರವಿ ಚನ್ನಣ್ಣನವರ್ ಸೇರಿದಂತೆ ಒಂಬತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

suchetana

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಗುರುವಾರ ಆದೇಶಿಸಿದೆ.

* ರವಿ ಡಿ. ಚನ್ನಣ್ಣನವರ್- ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ,

* ಡಾ. ಭೀಮಾಶಂಕರ್ ಎಸ್.ಗುಳೇದ್- ಬೆಂಗಳೂರು ನಗರ ಪೂರ್ವ ವಲಯ ಡಿಸಿಪಿ,

* ಅಬ್ದುಲ್ ಅಹದ್- ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗ್ರತ ದಳದ ನಿರ್ದೇಶಕ,

* ಟಿ. ಶ್ರೀಧರ- ಡಿಸಿಆರ್‌ಇ ಎಸ್‌ಪಿ,

* ಟಿ. ಪಿ. ಶಿವಕುಮಾರ್- ಚಾಮರಾಜನಗರ ಎಸ್‌ಪಿ,

* ದಿವ್ಯಾ ಸಾರಾ ಥಾಮಸ್ - ಮೈಸೂರು ಕೆಪಿಎ ಉಪ ನಿರ್ದೇಶಕಿ,

* ದೆಕ್ಕಾ ಕಿಶೋರ್ ಬಾಬು, ಬೀದರ್ ಎಸ್‌ಪಿ,

* ಅರುಣಾಂಗಕ್ಷು ಗಿರಿ- ಕೊಪ್ಪಳ ಎಸ್‌ಪಿ

* ಡಿ. ಎಲ್. ನಾಗೇಶ್ ಅವರನ್ನು ಸಿಐಡಿ ಎಸ್‌ಪಿ