ಜಿಲ್ಲೆ

ಒಂಟಿ ದಾರಿಹೋಕರೇ ಇವರ ಟಾರ್ಗೆಟ್​- ಮೈಸೂರಿನ ಖತರ್ನಾಕ್​ ಗ್ಯಾಂಗ್​ ಅರೆಸ್ಟ್​

suchetana

ಮೈಸೂರು: ಮೈಸೂರಿನ ವಿವಿಧೆಡೆ ರಾತ್ರಿ ವೇಳೆ ಸಂಚಾರ ಮಾಡುತ್ತಿರುವವರನ್ನು ಅಡ್ಡಗಟ್ಟಿ ಬೆದರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್​ ಗ್ಯಾಂಗ್​ ಒಂದನ್ನು ಪೊಲೀಸರು ಬಂಧಿಸಿದ್ದಾರೆ.

ಒಂಟಿಯಾಗಿ ಸಂಚಾರ ಮಾಡುತ್ತಿದ್ದವರನ್ನು ಟಾರ್ಗೆಟ್​ ಮಾಡಿಕೊಂಡಿದ್ದ ಎಂಟು ಮಂದಿಯ ಈ ಗ್ಯಾಂಗ್​ ಪ್ರತಿರಾತ್ರಿ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಅವರನ್ನು ಬೆದರಿಸಿ ದೋಚುತ್ತಿದ್ದರು. ಅವರಿಂದ ಹಣ, ಒಡವೆ ಮತ್ತು ಮೊಬೈಲ್‌ಗಳನ್ನು ಕಸಿದುಕೊಳ್ಳುತ್ತಿದ್ದರು.

ಇವರನ್ನು ಹೊಂಚು ಹಾಕಿ ಮೈಸೂರಿನ ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ. ಬೋಗಾದಿಯ ಶರತ್( 25), ಸುಮಂತ್(24), ದಿನೇಶ(26), ಕಾರ್ತಿಕ್(25), ಮರಟಿ ಕ್ಯಾತನಹಳ್ಳಿಯ ಧರ್ಮೇಶ(22), ಬೀರಿಹುಂಡಿಯ ಸುನೀಲ್ ಕುಮಾರ್(32), ಚಾಮರಾಜನಗರದ ಶಶಾಂಕ್(22), ಹೂಟಗಳ್ಳಿಯ ಮಹದೇವ (24) ಬಂಧಿತ ಆರೋಪಿಗಳು.

ರೈಲ್ವೆ ನಿಲ್ದಾಣ, ಗ್ರಾಮಾಂತರ ಬಸ್ ನಿಲ್ದಾಣ, ಸರಸ್ವತಿಪುರಂ ರೈಲ್ವೆ ಅಂಡರ್ ಬ್ರಿಡ್ಜ್‌ಗಳಲ್ಲಿ ಹೆಚ್ಚಾಗಿ ಒಂಟಿ ಸಂಚಾರ ಮಾಡುತ್ತಿದ್ದುದರಿಂದ ಅಲ್ಲಿಯೇ ಇವರು ದರೋಡೆ ದಂಧೆಗೆ ಇಳಿಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)