ನುಗ್ಗೇಹಳ್ಳಿ: ಹೋಬಳಿಯ ಅಕ್ಕನಹಳ್ಳಿ ಕ್ರಾಸ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಸ್.ಎಂ.ಮಧು, ಉಪಾಧ್ಯಕ್ಷರಾಗಿ ನಂಜಮ್ಮ ಬಸವೇಗೌಡ ಅವಿರೋಧವಾಗಿ ಆಯ್ಕೆಯಾದರು.
ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ವಾಸಿಂ ಶರೀಫ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿ ಮಾತನಾಡಿ, ತಾಲೂಕಿನ ಬಹುತೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅಕ್ಕನಹಳ್ಳಿ ಕ್ರಾಸ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಗೆ ಸುಮಾರು 23 ಗ್ರಾಮಗಳು ಬರುತ್ತವೆ. ಸಂಘದ ವತಿಯಿಂದ ಈಗಾಗಲೇ ಸಾವಿರಾರು ಷೇರುದಾರ ರೈತರಿಗೆ ಸಾಲ ನೀಡಲಾಗಿದೆ. ಜಿಲ್ಲಾ ಸಹಕಾರ ಬ್ಯಾಂಕ್‌ಗೆ ನಬಾರ್ಡ್ ವತಿಯಿಂದ ಹೆಚ್ಚಿನ ಸಾಲ ನೀಡುತ್ತಿಲ್ಲ. ಇದರಿಂದ ಕೃಷಿ ಪತ್ತಿನ ಮೂಲಕ ರೈತರಿಗೆ ಸಾಲ ನೀಡಲು ಸಮಸ್ಯೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ನಬಾರ್ಡ್ ಅಧಿಕಾರಿಗಳೊಂದಿಗೆ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುವುದಾಗಿ ಹೇಳಿದರು.
ಮೇಲ್ವಿಚಾರಕ ಅಭಿಲಾಶ್, ಕಾರ್ಯನಿರ್ವಹಣಾಧಿಕಾರಿ ಎ.ಟಿ.ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್.ದೊರೆಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಕ್ಟರ್, ಉದ್ಯಮಿ ಜಗದೀಶ್, ನುಗ್ಗೇಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಎಂ.ಸಿ.ವಾಸು, ಎಸ್.ಜೆ.ವಾಸುದೇವ್, ನಿರ್ದೇಶಕ ನವೀನ್ ಕುಮಾರ್, ಮೊದಲಗೆರೆ ಎಂ.ಎಂ.ದಿಲೀಪ್, ಗೋಪಾಲ್ ಗೌಡ, ಮಂಜೇಗೌಡ, ಬೋರೇಗೌಡ, ಎ.ಎಂ.ಕಿಶೋರ್, ಹೊನ್ನೇಗೌಡ, ಸುಜಾತ, ಲಕ್ಷ್ಮಮ್ಮ, ಎಂ.ಎಂ.ದಿನೇಶ್, ಸೋಸಲಗೆರೆ ಮಂಜೇಗೌಡ, ಇಂದ್ರಜಿತ್, ಜೆ.ಮಾವಿನಹಳ್ಳಿ ಸುರೇಶ್, ಚಿನ್ನೇನಹಳ್ಳಿ ರಾಮು, ಅಂಗಡಿ ಭೀಮೇಶ್, ಬಸವನಪುರ ರಘು, ಸೋಸಲಗೆರೆ ಚೇತನ್ ಕುಮಾರ್, ಶಂಕರ್, ಮುಳ್ಕೆರೆ ಚೇತನ್, ಅಕ್ಕನಹಳ್ಳಿ ವೆಂಕಟೇಶ್, ಅಕ್ಕನಹಳ್ಳಿ ರಾಜಕುಮಾರ್, ಹರೀಶ್, ಚಿನ್ನೇನಹಳ್ಳಿ ಪುಟ್ಟೇಗೌಡ, ಕಾರ್ಯದರ್ಶಿ ಹರ್ಷಿಣಿ, ಸಿಬ್ಬಂದಿ ಎ.ಜೆ.ಯತೀಶ್, ಪ್ರಕಾಶ್ ಇದ್ದರು.