ಜಿಲ್ಲೆ

ಕುವೆಂಪು ವಿವಿ: ಕಾಲೇಜು ಶುರು- ಸುತ್ತೋಲೆ ಹೊರಡಿಸಿದ ಕುಲಪತಿ

suchetana

ಶಿವಮೊಗ್ಗ: 2020-21ನೇ ಶೈಕ್ಷಣಿಕ ಸಾಲಿನ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ತರಗತಿಗಳನ್ನು ಇದೇ 17ರಂದು ಆನ್‌ಲೈನ್/ ಆಫ್‌ಲೈನ್ ಮೂಲಕ ಪುನರಾರಂಭಿಸಲು ಸಂಬಂಧಿಸಿದ ಎಲ್ಲಾ ಕಾಲೇಜುಗಳಿಗೆ ಕುವೆಂಪು ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಡಿ ಬರುವ ಎಲ್ಲಾ ಕಾಲೇಜುಗಳಿಗೆ 17ರಂದು ತರಗತಿಗಳು ಆರಂಭವಾಗಲಿದೆ.

ಅದೇ ರೀತಿ, 2020-21 ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಗಳ ಪ್ರವೇಶಾತಿ ದಿನಾಂಕವನ್ನು ಯಾವುದೇ ದಂಡ ಶುಲ್ಕವಿಲ್ಲದೇ ದಿನಾಂಕ 13:11:2020 ರವರೆಗೆ ವಿಸ್ತರಿಸಲಾಗಿದೆ.

ಕುಲಪತಿಯವರ ಅನುಮೋದನೆ ಅನ್ವಯ ಪ್ರವೇಶಾತಿ ಹಾಗೂ ತರಗತಿ ಪ್ರಾರಂಭದ ದಿನಾಂಕವನ್ನು ಘೋಷಿಸಿದ್ದು, ಅದರನ್ವಯ ಕ್ರಮಕೈಗೊಳ್ಳಲು ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.