ಮಂಗಳೂರು : ಅನಗತ್ಯ ಒತ್ತಡದ ಜತೆಗೆ ಈಗ ಜೀವಿಸುವ ಪರಿಸ್ಥಿತಿ ಎದುರಾಗಿದೆ. ಆಹಾರ ಪದ್ಧತಿ, ಒತ್ತಡದ ಜೀವನ ಶೈಲಿಯಿಂದಾಗಿ ವಿವಿಧ ಕಾಯಿಲೆಗಳು ಸುತ್ತಿಕೊಳ್ಳುತ್ತಿವೆ. ಹೃದಯಾಘಾತದ ಸಂಖ್ಯೆ ಶೇ.20ಕ್ಕೆ ಏರಿಕೆಯಾಗಿದೆ. ಹಿತ ಮಿತ ಆಹಾರ ಹಾಗೂ ಶಿಸ್ತು ಬದ್ಧ ಜೀವನ ಶೈಲಿಯಿಂದ ನೆಮ್ಮದಿ ಕಂಡುಕೊಳ್ಳಬಹುದು ಎಂದು ಮನೋವೈದ್ಯ, ಸಾಹಿತಿ ಡಾ.ಸಿ.ಆರ್. ಚಂದ್ರಶೇಖರ್ ಹೇಳಿದರು.
ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರಗಿದ ಸಮಾರಂಭದಲ್ಲಿ ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವದ ಲಾಂಛನ ಅನಾವರಣಗೊಳಿಸಿದ ಅವರು
‘ವ್ಯಕ್ತಿತ್ವ ವಿಕಸನದಲ್ಲಿ ಮಾನಸಿಕ ಒತ್ತಡ ನಿರ್ವಹಣೆ ‘ವಿಷಯದ ಕುರಿತು ಸಂವಾದ ನಡೆಸಿದರು.
ಇದೇ ಸಂದರ್ಭ ಸೊಸೈಟಿ ವತಿಯಿಂದ ಡಾ.ಸಿ.ಆರ್. ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ಡಾ.ಎಸ್‌ಪಿ.ಗುರುದಾಸ್
ಅಭಿನಂದನಾ ಭಾಷಣ ಮಾಡಿದರು. ಸಂವಾದ ಕಾರ್ಯಕ್ರಮವನ್ನು ರತ್ನಾವತಿ ಜೆ. ಬೈಕಾಡಿ ಮತ್ತು ಭರತ್ ಜೆ. ಬೈಕಾಡಿ ನಿರ್ವಹಿಸಿದರು.
ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, ಕಾಳಿಕಾಂಬಾ
ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಉಮೇಶ್ ಆಚಾರ್ಯ,ವಿರಾಟ್ ವಿಶ್ವಗ್ಲೋಬಲ್ ಫೌಂಡೇಶನ್ ಅಧ್ಯಕ್ಷ ಎಸ್. ಮಾಳಿಗಾಚಾರ್, ಡಾ.ಸಿ.ಎ. ನಾಗರಾಜ ಆಚಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸೊಸೈಟಿಯ ನಿರ್ದೇಶಕರಾದ ವಿ.ಜಯ ಆಚಾರ್, ಕೆ.ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್.ಪತ್ತಾರ್, ರೋಹಿಣಿ ಎಂ.ಪಿ.,
ಜ್ಯೋತಿ ಎಂ.ವಿ., ರಮೇಶ್ ರಾವ್ ಯು., ಕೆ.ಪ್ರಕಾಶ ಆಚಾರ್ಯ, ಮಂಜುನಾಥ ಆಚಾರ್ಯ,ಚಂದ್ರಶೇಖರ್ ಎ.ಎಸ್. ವೈ.ವಿ.ವಿಶ್ವಜ್ಞ ಮೂರ್ತಿ ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎ.ಆನಂದ ಆಚಾರ್ಯ ಸ್ವಾಗತಿಸಿ, ನಿರ್ದೇಶಕ ಕೆ. ಯಜ್ಞೇಶ್ವರ ಆಚಾರ್ಯ ವಂದಿಸಿದರು. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.