ಜಿಲ್ಲೆ

ಬೆಂಗಳೂರಿನ ಕೋರ್ಟ್​ನಲ್ಲಿ 133 ಸ್ಟೆನೊ, ಟೈಪಿಸ್ಟ್​, ಅಟೆಂಡರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಸಿಟಿ ಸಿವಿಲ್ ಕೋರ್ಟ್​ನಲ್ಲಿ ಟೈಪಿಸ್ಟ್, ಸ್ಟೆನೋಗ್ರಾಫರ್ (ಶೀಗ್ರಲಿಪಿಕಾರರು) ಅಟೆಂಡರ್​, ಪ್ರೊಸಸರ್ವರ್​ ಸೇರಿದಂತೆ ಒಟ್ಟು 133 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ
ಸ್ಟೆನೋಗ್ರಾಫರ್ ಗ್ರೇಡ್-III: ಒಟ್ಟು ಹುದ್ದೆಗಳು 17.
ಟೈಪಿಸ್ಟ್: ಒಟ್ಟು ಹುದ್ದೆಗಳು 24
ಪ್ರೊಸಸರ್ವರ್​: ಒಟ್ಟು ಹುದ್ದೆಗಳು 5
ಅಟೆಂಡರ್​: ಒಟ್ಟು ಹುದ್ದೆಗಳು 87

ಶೈಕ್ಷಣಿಕ ಅರ್ಹತೆ:
ಸ್ಟೆನೋಗ್ರಾಫರ್ ಗ್ರೇಡ್-III ಹಾಗೂ ಟೈಪಿಸ್ಟ್​ ಹುದ್ದೆಗಳಿಗೆ ಪಿಯುಸಿ, ವಾಣಿಜ್ಯದಲ್ಲಿ ಡಿಪ್ಲೊಮಾ.
ಪ್ರೊಸೆಸರ್ವರ್​ ಹಾಗೂ ಅಟೆಂಡರ್​ ಹುದ್ದೆಗೆ ಎಸ್​ಎಸ್​ಎಲ್​ಸಿ.

ವೇತನ:
ಸ್ಟೆನೋಗ್ರಾಫರ್ ಗ್ರೇಡ್-III ಹುದ್ದೆಗೆ ರೂ.27650-52650

ಟೈಪಿಸ್ಟ್ ಹುದ್ದೆಗೆ ರೂ.21400-42000/-

ಪ್ರೊಸೆಸರ್ವರ್​ ಹುದ್ದೆಗೆ ರೂ.19950-37900/-

ಅಟೆಂಡರ್​ ಹುದ್ದೆಗೆ ರೂ.17000-28950/-

ವಯೋಮಿತಿ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 20-05-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು. SC/ST/Cat-I ಅಭ್ಯರ್ಥಿಗಳು: 05 ವರ್ಷಗಳು, Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು, PWD ಮತ್ತು ವಿಧವೆ ಅಭ್ಯರ್ಥಿಗಳು: 10 ವರ್ಷಗಳು.


ಅರ್ಜಿ ಶುಲ್ಕ: SC/ST/Cat-I/PH ಅಭ್ಯರ್ಥಿಗಳು: ಶುಲ್ಕವಿಲ್ಲ. Cat-2A/2B/3A & 3B ಅಭ್ಯರ್ಥಿಗಳು: ರೂ.100/ ಹಾಗೂ ಸಾಮಾನ್ಯ ಅಭ್ಯರ್ಥಿಗಳು: ರೂ.200.


ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ

ಕೊನೆಯ ದಿನ: ಮೇ 20
ಅರ್ಜಿ ಸಲ್ಲಿಕೆಗೆ ಕ್ಲಿಕ್ಕಿಸಿ

ಹೆಚ್ಚಿನ ಮಾಹಿತಿಗೆ ವೆಬ್​ಸೈಟ್​: districts.ecourts.gov.in

ಅರ್ಜಿ ಸಲ್ಲಿಕೆಗೆ ಇಲ್ಲಿದೆ ಮಾಹಿತಿ: 
ಸ್ಟೆನೊ: https://bit.ly/3s7HFoD

ಟೈಪಿಸ್ಟ್​: https://bit.ly/3ybQzW8

ಪ್ರೊಸೆಸರ್ವರ್​: https://bit.ly/3s7lBuu

ಅಟೆಂಡರ್​: https://bit.ly/3OMyeEV