ಜಿಲ್ಲೆ

ನಡುಬೀದಿಯಲ್ಲಿ ಮಹಿಳೆಯ ಎಳೆದು ಎಸ್ಕೇಪ್‌ ಆಗಿದ್ದ ಜೆಡಿಎಸ್‌ ಮುಖಂಡ ಅಂದರ್‌

suchetana

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರನ್ನು ನಡು ಬೀದಿಯಲ್ಲೇ ಕೈ ಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ‌ನನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಧಾರವಾಡ ಹೊರವಲಯದ ಸತ್ತೂರ ಬಳಿ ಈ ಘಟನೆ ನಡೆದಿತ್ತು. ಶ್ರೀಕಾಂತ ಅವರು ಮಾಜಿ ಕಾರ್ಪೋರೇಟರ್ ಕೂಡ ಹೌದು. ಘಟನೆ ನಡೆಯುತ್ತಿದ್ದಂತೆಯೇ ಇದರ ವಿಡಿಯೋ ವೈರಲ್‌ ಆಗಿತ್ತು. ಪರಿಚಯಸ್ಥ ಮಹಿಳೆಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದ ಇವರು, ಮಹಿಳೆ ಕೈ ಹಿಡಿದು ಎಳೆದಾಡಿ ದರ್ಪ ಮೆರೆದಿದ್ದರು.

ಘಟನೆ ಬಳಿಕ ವಿದ್ಯಾಗಿರಿ ಠಾಣೆಗೆ ಮಹಿಳೆ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ವಿಡಿಯೋ ವೈರಲ್‌ ಆಗಿದ್ದರಿಂದ ಎಸ್ಕೇಪ್‌ ಆಗಿದ್ದ ಶ್ರೀಕಾಂತ್‌. ಪೊಲೀಸರು ಬಲೆ ಬೀಸಿ ಸವದತ್ತಿ ತಾಲೂಕಿನ ಹಳ್ಳಿಯೊಂದರಲ್ಲಿ ಜಮನಾಳದಿಂದ ಮುಖಂಡನನ್ನು ಬಂಧಿಸಿದ್ದಾರೆ. ಸದ್ಯ ಶ್ರೀಕಾಂತ ಜಮನಾಳ‌ ವಿದ್ಯಾಗಿರಿ ಠಾಣೆಯ ಅತಿಥಿ.