ಜಿಲ್ಲೆ

ಕೇರಳದಲ್ಲಿ ಜನಾರ್ದನ ರೆಡ್ಡಿ ಫೋಟೋ ಶೂಟ್​: ಏಳೇಳು ಜನುಮದಲೂ ತೀರದ ಸಂಬಂಧ ಎಂದ ಮಾಜಿ ಸಚಿವ...

ತಿರುವನಂತಪುರ: ಮಾಜಿ ಸಚಿವ, ಉದ್ಯಮಿ ಜನಾರ್ದನ ರೆಡ್ಡಿ (55) ಅವರೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದಾರೆ. ಇದಕ್ಕೆ ಕಾರಣ ಅವರು ಕೇರಳದಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿರುವುದು. ಪತ್ನಿ ಲಕ್ಷ್ಮೀ ಅರುಣಾ ಜತೆ ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕೇರಳಕ್ಕೆ ಪ್ರವಾಸಕ್ಕೆ ಹೋಗಿರುವ ಅವರು ಅಲ್ಲಿ ಫೋಟೋಶೂಟ್​ ಮಾಡಿಸಿಕೊಮಡಿದ್ದಾರೆ.

ಈ ಫೋಟೋಗಳನ್ನು ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಜನಾರ್ದನ ರೆಡ್ಡಿಯವರು, ಮದುವೆಯ ಈ ಬಂಧ, ಅನುರಾಗದ ಅನುಬಂಧ, ಏಳೇಳು ಜನುಮದಲೂ ತೀರದ ಸಂಬಂಧ ಎಂದು ಫೋಟೋಗೆ ಶೀರ್ಷಿಕೆ ಕೊಟ್ಟಿದ್ದಾರೆ.

ಈ ನಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಕೇಳಿಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಮಗಳು ಬ್ರಹ್ಮಣಿ ಮತ್ತು ಮಗ ಕಿರೀಟಿ. ಮಗಳಿಗೆ ಮದುವೆಯಾಗಿದ್ದು, ಮಗ ಕಿರೀಟಿ ಸದ್ಯ ಚಿತ್ರರಂಗದಲ್ಲಿ ಬಿಜಿ ಆಗಿದ್ದಾರೆ.