ಜಿಲ್ಲೆ

ಎಸ್.ಜಾನಕಿ ಮೆಲೋಡಿಸ್ ಸಂಸ್ಥೆಯಿಂದ ‘ಎಸ್.ಜಾನಕಿ ಗಾನೋತ್ಸವ’

ಮೈಸೂರು: ನಗರದ ಎಸ್.ಜಾನಕಿ ಮೆಲೋಡಿಸ್ ಸಂಸ್ಥೆಯಿಂದ ಜು.6ರಂದು ‘ಎಸ್.ಜಾನಕಿ ಗಾನೋತ್ಸವ’ ಆಯೋಜಿಸಲಾಗಿದೆ ಎಂದು ಗಾಯಕಿ ಲಕ್ಷ್ಮೀ ದಿನೇಶ್ ತಿಳಿಸಿದರು. ಖ್ಯಾತ ಗಾಯಕಿ ಜಾನಕಿ ಅವರ ಜನ್ಮದಿನದ ಅಂಗವಾಗಿ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಅಂದು ಸಂಜೆ 4ಕ್ಕೆ ಕಾರ್ಯಕ್ರಮ ಆಯೋಜಿಸಿದೆ. ಜಾನಕಿ ಕಂಠಸಿರಿಯಲ್ಲಿ ಮೂಡಿ ಬಂದ 30ಕ್ಕೂ ಹೆಚ್ಚು ಗೀತೆಗಳನ್ನು ಹಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಮ್ಮೊಂದಿಗೆ ಹವ್ಯಾಸಿ ಗಾಯಕರಾದ ಎಲ್.ಚಂದ್ರಶೇಖರ್, ಪ್ರಮಥ ಮಂಜುನಾಥ್, ಹನುಮಂತರಾಜು, ಕೆ.ಆರ್. ದಿನೇಶ್, ಕೃಷ್ಣಮೂರ್ತಿ ಚಮರಂ, ಡಿ.ಬಿ.ಸತ್ಯ, ಸಿ.ಎಸ್.ಕುಮಾರ್, ಅಶ್ವತ್ಥ, ಮುರಳೀಧರ್ ಹಾಗೂ ಸಂಘಮಿತ್ರೆ ಹಾಡಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಇದು ಸಂಸ್ಥೆಯ ಮೊದಲ ಕಾರ್ಯಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶವಿದೆ. ಗಾಯನ ತರಗತಿಗಳನ್ನೂ ಆಯೋಜಿಸಲಾಗುವುದು ಎಂದು ಅವರು ಹೇಳಿದರು.