ಜಿಲ್ಲೆ

ಹುಟ್ಟುತ್ತಲೇ ವೈರಲ್‌ ಆಯ್ತು ಹುಬ್ಬಳ್ಳಿಯ ಒಂದೇ ಕಾಲಿನ ಮಗು: ಆದರೆ ಮುಂದಾದದ್ದು ದುರಂತ

suchetana

ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನಿಸಿ ಭಾರಿ ಸುದ್ದಿ ಮಾಡಿದೆ. ಸೊಂಟದ ಕೆಳಭಾಗದಲ್ಲಿ ಒಂಟಿ ಕಾಲು ಬಿಟ್ಟರೆ ಯಾವುದೇ ಸಾಮಾನ್ಯ ಅಂಗಾಂಗಗಳನ್ನು ಹೊಂದಿರದ ಈ ಮಗುವನ್ನು ನೋಡಿ ವೈದ್ಯರು ಅಚ್ಚರಿ ಪಟ್ಟಿದ್ದಾರೆ.

ಈ ಮಗುವಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಮೊದಲೇ ಜನಿಸಿದ ಅರ್ಧ ಗಂಟೆಯಲ್ಲಿಯೇ ಮಗು ಮೃತಪಟ್ಟಿದೆ. ಆದರೆ ಇಷ್ಟು ಹೊತ್ತಿಗಾಗಲೇ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಬೆರಗುಗೊಳಿಸಿದೆ.

ಹೇರಿಗೆ ನೋವಿನಿಂದ ಬಳಲುತ್ತಿದ್ದ ರೇಷ್ಮಾ ಬಾನು ಎಂಬ ಮಹಿಳೆ ನಿನ್ನೆ ಭಾನುವಾರ ಕಿಮ್ಸ್​ಗೆ ದಾಖಲಾಗಿದ್ದರು. ಅವರು ಏಳು ತಿಂಗಳ ಗರ್ಭಿಣಿಯಾಗಿದ್ದರು. ಹೆರಿಗೆ ಮಾಡಿದಾಗ ಈ ಮಗು ಜನಿಸಿತ್ತು. ಮಕ್ಕಳ ವಿಭಾಗದ ತಜ್ಞರು ಈ ಮಗುವಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಹಲವು ಕಡೆಗಳಲ್ಲಿ ಸಿದ್ಧತೆ ನಡೆಸಿದ್ದರು. ಆದರೆ ಅಷ್ಟರಲ್ಲಿಯೇ ಮಗು ಮೃತಪಟ್ಟಿದೆ.

ಏಳು ತಿಂಗಳಿಗೇ ಹೆರಿಗೆ ಆದ್ದರಿಂದ ಮಗುವಿನ ಬೆಳವಣಿಗೆ ಆಗಿರುವುದಿಲ್ಲ ಎಂದು ತಿಳಿದಿತ್ತು. ಆದರೆ ಒಂದೇ ಕಾಲಿನ ವಿಚಿತ್ರ ಮಗು ಜನಿಸಿದ್ದರಿಂದ ಅಚ್ಚರಿಪಟ್ಟೆವು. ಅನುವಂಶೀಯ ಸಮಸ್ಯೆಯಿಂದ ಅಂಗವೈಕಲ್ಯದ ಮಗು ಹುಟ್ಟುವುದು ಸಾಮಾನ್ಯವಾಗಿದ್ದರೂ, ಇದು ಮಾತ್ರ ಅಪರೂಪದ ಮಗುವಾಗಿತ್ತು ಎಂದಿದ್ದಾರೆ ವೈದ್ಯರು.