ಜಿಲ್ಲೆ

ಹೊನ್ನಾವರ-ಜೋಗ ರಸ್ತೆಯಲ್ಲಿ ಭೂಕುಸಿತ: ವಾಹನ‌ ಸಂಚಾರ ಸ್ಥಗಿತ- ಪರ್ಯಾಯ ಮಾರ್ಗ ಹೀಗಿದೆ

suchetana

ಕಾರವಾರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೊನ್ನಾವರ-ಗೇರುಸೊಪ್ಪ-ಮಾವಿನಗುಂಡಿ- ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತ ಮಾಡಲಾಗಿದೆ.

ಹೊನ್ನಾವರ ಸೂಳೆಮುರ್ಕಿ ಕ್ರಾಸ್ ಬಳಿ ರಸ್ತೆಯ ಒಂದು ಕಡೆ ಸುಮಾರು200 ಮೀಟರ್ ಕುಸಿತ ಉಂಟಾಗಿದೆ. ಇನ್ನಷ್ಟು ಕುಸಿತ ಉಂಟಾಗುವ ಸಾಧ್ಯತೆ ಇರುವ ಕಾರಣ ವಾಹನ ಸಂಚಾರ ಬಂದ್ ಮಾಡಲಾಗಿದೆ.

ವಾಹನಗಳು ಕುಮಟಾ-ಸಂತೆಗುಳಿ-ಸಿದ್ದಾಪುರ ಅಥವಾ ಕುಮಟಾ- ಶಿರಸಿ ಮಾರ್ಗವಾಗಿ ಸಂಚರಿಸಬಹುದಾಗಿದೆ.