ಬೆಂಗಳೂರು: ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ದಿಗ್ವಿಜಯ ನ್ಯೂಸ್ ಚಾನಲ್ ಮತ್ತು ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಮತ್ತು ಯುನಿಲೆಟ್ ಸಹಭಾಗಿತ್ವದಲ್ಲಿ ಮಾ.4ರಿಂದ ಮಾ.7ರವರೆಗೆ " ಆ್ಯಂಡ್ ಹೋಮ್ ಇಂಟೀರಿಯರ್ ಎಕ್ಸ್ಪೋ-2022 ಆಯೋಜಿಸಲಾಗಿದ್ದು, ಬಹುತೇಕ ರ್ನಿಚರ್ಗಳ ಮೇಲೆ ಶೇ.70ವರೆಗೆ ರಿಯಾಯಿತಿ ನೀಡಲಾಗುತ್ತದೆ.
ಕಳೆದ ಒಂದೂವರೆ ವರ್ಷಗಳಿಂದ ಸಾಂಕ್ರಾಮಿಕ ಪಿಡುಗ ಆಗಿ ಕಾಡಿದ್ದ ಕೋವಿಡ್ ಸೋಂಕಿನ ಪ್ರಭಾವ ಕಡಿಮೆಯಾಗಿದ್ದು, ಎಲ್ಲರೂ ಲಸಿಕೆ ಪಡೆಯುವ ಮೂಲಕ ಸೋಂಕು ಶೂನ್ಯಗೊಳಿಸುವಲ್ಲಿ ಕೈಜೋಡಿಸಿದ್ದಾರೆ. ಈಗ ಹಿಂದಿನ ವೈಭವದಂತೆ ಎಲ್ಲ ವಾಣಿಜ್ಯೋಮಗಳ ವಹಿವಾಟಿನಲ್ಲಿ ವೈಭವ ಮರುಕಳಿಸುತ್ತಿದೆ. 2022ರಲ್ಲಿ ಮೊಟ್ಟ ಮೊದಲನೆಯದಾಗಿ ಅರಮನೆ ಮೈದಾನದಲ್ಲಿ 4 ದಿನಗಳವರೆಗೆ ಬೃಹತ್ ಫರ್ನೀಚರ್ ಎಕ್ಸ್ಪೋ ಆಯೋಜಿಸಲಾಗಿದೆ.
ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 9 ಗಂಟೆವರೆಗೆ ಎಕ್ಸ್ಪೋಗೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳಿಗೆ ಹೊಂದಾಣಿಕೆ ಆಗುವ ಮಾದರಿ ಮತ್ತು ವಿನ್ಯಾಸಕ್ಕೆ ಸರಿ ಹೊಂದುವ ರೀತಿಯ ಫರ್ನೀಚರ್ಗಳನ್ನು ಖರೀದಿಸಿ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಜತೆಗೆ, ಮನೆಯ ಮಂದಿಗೆಲ್ಲ ಹೊಂದಾಣಿಕೆ ಆಗುವ ಅಗತ್ಯತೆಯುಳ್ಳ ಫರ್ನೀಚರ್ಗಳನ್ನು ಆಯ್ಕೆ ಮಾಡಿಕೊಳ್ಳಲು ಎಕ್ಸ್ಪೋ ಸೂಕ್ತ ವೇದಿಕೆಯಾಗಲಿದೆ.
74ಕ್ಕೂ ಅಧಿಕ ಮಳಿಗೆಗಳು
ಫರ್ನಿಚರ್ಗಳು ಮತ್ತು ಮನೆಯ ಒಳಾಂಗಣಕ್ಕೆ ಅಳವಡಿಕೆ ಮಾಡುವ ಉಪಕರಣಗಳು ನಮ್ಮ ದೈನಂದಿನ ಅಗತ್ಯ ಪರಿಕರಗಳಾಗಿವೆ. ಇವುಗಳನ್ನು ಆಯ್ಕೆ ಮಾಡುವಾಗ ಗುಣಮಟ್ಟ, ಬಣ್ಣ, ಶೈಲಿ, ವಿನ್ಯಾಸದ ಹಾಗೂ ಉತ್ತಮ ಬೆಲೆಯನ್ನು ನಾವು ಗಮನಿಸಬೇಕಾಗುತ್ತದೆ. ಒಂದು ಮಳಿಗೆಯಲ್ಲಿ ಹೋಗಿ ಫರ್ನೀಚರ್ ಖರೀದಿಗೆ ಮುಂದಾದಲ್ಲಿ ಅವರು ಹೇಳಿದ ಬೆಲೆಯಷ್ಟೇ ಹಣವನ್ನು ಪಾವತಿಸಬೇಕಾಗುತ್ತದೆ. ಎಷ್ಟೇ ಚೌಕಾಸಿ ಮಾಡಿದರೂ ನಮ್ಮ ನಿರೀಕ್ಷೆಯಷ್ಟು ಬೆಲೆಗಳಿಗೆ ಗುಣಮಟ್ಟದ ಗೃಹೋಪಯೋಗಿ ವಸ್ತುಗಳು ಸಿಗುವುದಿಲ್ಲ. ಆದರೆ, ಈಗ ಈಗ ನಡೆಯುತ್ತಿರುವ ಎಕ್ಸ್ಪೋದಲ್ಲಿ ನಾವು ಹತ್ತಾರು ಮಳಿಗೆಗಳನ್ನು ಸುತ್ತಾಡಿದರೂ ಸಿಗದಂತಹ ಉತ್ತಮ ಗುಣಮಟ್ಟದ ಫರ್ನೀಚರ್ಗಳು ಮತ್ತು ಒಳಾಂಗಣ ವಿನ್ಯಾಸದ ಪರಿಕರಗಳು ಒಂದೇ ವೇದಿಕೆಯಲ್ಲಿ ಸಿಗಲಿವೆ. ಒಂದು ಎಕ್ಸ್ಪೋದಲ್ಲಿ ಒಟ್ಟು 74 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ನಮಗಿಷ್ಟವಾದ ಪೀಠೋಪಕರಣ ಆಯ್ಕೆಗೆ ಅವಕಾಶ ಸಿಗಲಿದೆ.
ಎಕ್ಸ್ಪೋದಲ್ಲಿ ಏನೇನಿರುತ್ತವೆ?
ಎಕ್ಸ್ಪೋದಲ್ಲಿ ಇಟಾಲಿಯನ್ ಡಿಸೈನರ್ ಸೋಫಾಗಳು, ಕಚೇರಿಗೆ ಬೇಕಾದ ಪೀಠೋಪಕರಣಗಳು, ಕಾರ್ಪೆಟ್ಗಳು, ಬೆಡ್ರೂಮ್ ಸೆಟ್ಗಳು, ವಾಲ್ಫ್ರೇಮ್ಗಳು, ಮಸಾಜ್ ಚೇರ್ಗಳು, ಮ್ಯಾಟ್ರೆಸೆಸ್ (ಹಾಸಿಗೆ), ಆರಾಮದಾಯಕ ಸೋಫಾಗಳು, ಡೈನಿಂಗ್ ಸೆಟ್ಗಳು, ಗಾರ್ಡನ್ ಪೀಠೋಪಕರಣಗಳು, ಆರ್ಟಿಫಿಷಿಯಲ್ ಹೂವುಗಳು, ಡೆಕೋರೇಟಿವ್ ವಸ್ತುಗಳು, ಟೀಕ್ವುಡ್ ಪೀಠೋಪಕರಣಗಳು ಸೇರಿ ಇನ್ನು ಅನೇಕ ಉಪಕರಣಗಳು ಇಲ್ಲಿ ಲಭ್ಯವಾಗುತ್ತದೆ.
ವಾರಾಂತ್ಯದಲ್ಲಿ ಪಿಕ್ನಿಕ್ ಮಾದರಿ ಭೇಟಿ:
ನಗರದಲ್ಲಿ ಜೀವನ ಮಾಡುವ ಬಹುತೇಕರು ವಾರದ 5 ದಿನಗಳನ್ನು ಒಂದಿಷ್ಟೂ ವ್ಯರ್ಥ ಮಾಡದೇ ದುಡಿಮೆಯಲ್ಲಿ ಕಳೆಯುತ್ತಾರೆ ಕೆಲಸದ ಅವಧಿಯಲ್ಲಿ ಮನೆ ಮತ್ತು ಕುಟುಂಬ ಸದಸ್ಯರಿಗೆ ಸಮಯ ಕೊಡಲು ಸಾಧ್ಯವಾಗಿರುವುದಿಲ್ಲ. ಭಾನುವಾರ ಎಲ್ಲಾದರೂ ಹೊರಗೆ ಹೋಗಬೇಕೆಂದರೆ ಕೆಲವು ಪ್ರವಾಸಿ ತಾಣಗಳಿಗೆ ರ್ನಿಬಂಧ ವಿಧಿಸಲಾಗಿರುತ್ತದೆ. ಹೀಗಾಗಿ, ರಜಾದಿನಗಳನ್ನು ಒಂದು ಪಿಕ್ನಿಕ್ ಮಾದರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಕಳೆಯಲು ಫರ್ನೀಚರ್ ಎಕ್ಸ್ಪೋ-2022ಕ್ಕೆ ಭೇಟಿ ಮಾಡಬಹುದು. ಎಲ್ಲ ಪೀಠೋಪಕರಣಗಳನ್ನು ನೋಡಿ ತಮಗೆ ಇಷ್ಟವಾದಲ್ಲಿ ಅದನ್ನು ಸ್ಥಳದಲ್ಲಿಯೇ ಖರೀದಿ ಮಾಡಲು ಮುಕ್ತ ಅವಕಾಶ ಲಭ್ಯವಾಗಲಿದೆ.