ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಂದು ವಿಶೇಷ ದಿನ. ಎರಡು ತಿಂಗಳ ಹಿಂದೆ ಹುಟ್ಟಿದ್ದ ಪುಟಾಣಿಗೆ ನಾಮಕರಣ ಮಾಡಿದ ದಿನವಿದು.
ಹೌದು. ಜುಲೈ1 ರಂದು ಲಕ್ಷ್ಮಿಗೆ ಹುಟ್ಟಿದ ಮರಿಯಾನೆಗೆ ಇಂದು ನಾಮಕರಣದ ಸಂಭ್ರಮ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ನಾಮಕರಣ ವಿಧಿ ನೆರವೇರಿಸಿದರು.
ತುಲಾ ಲಗ್ನ ಮುಹೂರ್ತದಲ್ಲಿ ಈ ಹೆಣ್ಣುಮರಿಗೆ ಶಿವಾನಿ ಎಂದು ನಾಮಕರಣ ಮಾಡಲಾಯಿತು. ಧರ್ಮಸ್ಥಳದ ಡಾ.ಡಿ.ಹೆಗ್ಗಡೆ ಮೊಮ್ಮಗಳು ಶಿವಾನಿ ಹೆಸರು ಉದ್ಘೋಷಿಸುವ ಮೂಲಕ ನಾಮಕರಣ ಮಾಡಲಾಯಿತು.
ಇದನ್ನೂ ಓದಿ: ಕರೊನಾ ಹೆಚ್ಚಳಕ್ಕೆ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕಾರಣ ಎಂದ ದಿನೇಶ್ ಗುಂಡೂರಾವ್: ಕಮೆಂಟಿಗರು ಕಿಡಿಕಿಡಿ…
ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಆನೆಯ ಮಾವುತ ಕೃಷ್ಣ ಅವರಿಗೂ ಈ ಸಂದರ್ಭದಲ್ಲಿ ಸನ್ಮಾನಿಸಿದರು.
ಹೇಮಾವತಿ ವಿ ಹೆಗ್ಹಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸೇರಿದಂತೆ ಕೆಲವರು ಈ ನಾಮಕರಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.