ಜಿಲ್ಲೆ

ಅಭಿವೃದ್ಧಿಗೆ ಎಸ್.ಡಿ.ಜಯರಾಂ ಕೊಡುಗೆ ಅಪಾರ: ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಬಣ್ಣನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಚಿವ ಎಸ್.ಡಿ.ಜಯರಾಂ ಅವರ ಕೊಡುಗೆ ಅಪಾರ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಹೇಳಿದರು.

ನಗರದ ಹೊಸಹಳ್ಳಿ ವೃತ್ತದಲ್ಲಿರುವ ಎಸ್.ಡಿ.ಜಯರಾಂ ಆಟೋ ನಿಲ್ದಾಣದಲ್ಲಿ ಎಸ್.ಡಿ.ಜಯರಾಂ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಹಾಗೂ ಹಿತೈಷಿಗಳು ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಸಚಿವ ಎಸ್.ಡಿ.ಜಯರಾಂ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕ ಹಾಗೂ ಸಚಿವರಾಗಿ ಹಳ್ಳಿಗಳಿಗೆ ಶಾಲೆ, ಗ್ರಾಮೀಣಾಭಿವೃದ್ಧಿ, ರಸ್ತೆ ಹಾಗೂ ಚರಂಡಿ ಅಭಿವೃದ್ಧಿಯನ್ನು ಸಾಗರೋಪಾದಿಯಲ್ಲಿ ಮಾಡಿ ಯಶಸ್ವಿಯಾಗಿ ಮಾದರಿ ಶಾಸಕರೆಂದು ಜನರಿಂದ ಕರೆಸಿಕೊಂಡ ಅಪರೂಪದ ರಾಜಕಾರಣಿಯಾಗಿದ್ದಾರೆ ಎಂದು ಸ್ಮರಿಸಿದರು.

ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಗ್ರಾಮ ಪಂಚಾಯಿತಿ ಸದಸ್ಯ ಕಮ್ಮನಾಯಕನಹಳ್ಳಿ ಅನಿಲ್ಕುಮಾರ್, ನೆಲದನಿ ಬಳಗ ಅಧ್ಯಕ್ಷ ಲಂಕೇಶ್ ಮಂಗಲ, ಬಿಜೆಪಿ ಮುಖಂಡರಾದ ವಿವೇಕ್, ಶಿವಕುಮಾರ್ ಕೆಂಪಯ್ಯ, ಭೀಮೇಶ್, ಶಂಕರ್, ಧರಣೇಂದ್ರ, ಪ್ರಸನ್ನ, ಚಂದ್ರು ಇತರರಿದ್ದರು.