ಕಲಬುರಗಿ: ಕಲಬುರಗಿ ಜಿಲ್ಲೆಯ ಯರಗೋಳ ಗ್ರಾಮದಿಂದ ಜಿಲ್ಲೆ ಶಹಬಾದ್ ಪಟ್ಟಣಕ್ಕೆ 33 ಗೋವುಗಳನ್ನ ಕರೆದ್ಯೊಯ್ತಿದ್ದ ಮಹಿಳೆಯ ಮೇಲೆ ಹಿಂದೂ ಸಂಘಟನೆಗಳು ದಾಳಿ ನಡೆಸಿವೆ. ವಾಡಿ ಪಟ್ಟಣದ ಬಲರಾಮ ಚೌಕ್ ಬಳಿ ಈ ದಾಳಿ ನಡೆದಿದೆ.
ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದಿರಿ ಎಂದು ಅರೋಪಿಸಿ ಈ ದಾಳಿ ನಡೆಸಲಾಗಿದೆ. ಈ ಸಂಬಂಧ ಪೊಲೀಸರಿಗೆ ಮೌಖಿಕ ದೂರು ನೀಡಿದ್ದಾರೆ ಹಿಂದೂ ಸಂಘಟನೆಗಳ ಕಾರ್ಯಕರ್ತರು. ಸ್ಥಳಕ್ಕೆ ಬಂದ ವಾಡಿ ಠಾಣೆ ಪೊಲೀಸರಿಂದ ಗೋವುಗಳ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ಆದರೆ ಮಹಿಳೆ ಹೇಳುತ್ತಿರುವುದೇ ಬೇರೆ. ಆಕಳನ್ನ ಕಟುಕರಿಗೆ ಮಾರಕ್ಕ ತಂದಿಲ್ರಿ..ನನ್ನ ಮಗಳ ಊರಿಗೆ ಬಿಡಲು ತಂದಿದ್ದೇನೆ. ಸಾಕುವ ಜಾನುವಾರುಗಳನ್ನ ನಾನು ಕಟುಕರಿಗೆ ಮಾರಲ್ಲರೀ ಸಾಹೇಬ್ರ..ನನಗೆ ಬಿಟ್ಟುಬಿಡ್ರೀ ಅಂತಾ ಗೋಳಾಡಿದ್ದಾಳೆ ಮಹಿಳೆ. ಮಗಳ ಊರಿಗೆ ಇದನ್ನು ಒಯ್ಯುತ್ತಿದ್ದು, ನಾನು ಕಟುಕರಿಗೆ ಮಾರುತ್ತಿಲ್ಲ ಎಂದು ಸಮಜಾಯಿಷಿ ನೀಡಿದ್ದಾಳೆ ಮಹಿಳೆ.
ಆದರೂ ಪರವಾನಿಗೆ ಇಲ್ಲದೇ ಗೋವುಗಳ ಸಾಗಾಟ ಹಿನ್ನಲೆಯಲ್ಲಿ ಗೋವುಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಕೊಂಚೂರು ಪುಣ್ಯಕೋಟಿಗೆ ಕಳುಹಿಸಿದ್ದಾರೆ, ತನಿಖೆಯಿಂದ ಇನ್ನಷ್ಟೇ ಸತ್ಯ ಬಯಲಾಗಬೇಕಿದೆ.