ಜಿಲ್ಲೆ

ಪ್ರೀತಿಗೆ ಪಾಲಕರ ವಿರೋಧ- ಕೈಕೈ ಹಿಡಿದು ಕಪಿಲಾ ನದಿಗೆ ಹಾರಿದ ಚಾಮರಾಜನಗರದ ಅಪ್ರಾಪ್ತರು!

suchetana

ಮೈಸೂರು: ಚಾಮರಾಜನಗರ ಹೆಬ್ಬಸೂರು ಗ್ರಾಮದ 17 ವರ್ಷದ ಬಾಲಕಿ ಹಾಗೂ 19 ವರ್ಷದ ಬಾಲಕ ಕಪಿಲಾ ನದಿಗೆ ಹಾರಿರುವ ಘಟನೆ ನಡೆದಿದೆ.

ಚಾಮರಾಜನಗರದ ಕಾಲೇಜೊಂದರಲ್ಲಿ ಕಲಿಯುತ್ತಿರುವ ಬಾಲಕಿ ಹಾಗೂ ಪೆಟ್ರೋಲ್‌ ಬಂಕ್‌ ಒಂದರಲ್ಲಿ ಕೆಲಸ ಮಾಡುತ್ತಿರುವ ಅಭಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಈ ಪ್ರೀತಿಗೆ ಪಾಲಕರ ವಿರೋಧವಿತ್ತು. ಇದರಿಂದಾಗಿ ಮನನೊಂದು ಕೈಕೈಹಿಡಿದು ಇಬ್ಬರೂ ಮುಡಿಕಟ್ಟೆ ಬಳಿ ಕಪಿಲೆಗೆ ಹಾರಿದ್ದಾರೆ.

ಅವರ ಅದೃಷ್ಟಕ್ಕೆ ಅಲ್ಲಿಯೇ ಇದ್ದ ಅಂಬಿಗರು ಪ್ರೇಮಿಗಳು ಹಾರುವುದನ್ನು ನೋಡಿ ಕೂಡಲೇ ಅವರ ರಕ್ಷಣೆ ಮಾಡಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.