ಜಿಲ್ಲೆ

'ವಿಡಿಯೋ ಮಾಡಿದ್ದು ನಾನೇ... ಸಿಡಿ ವೈರಲ್​ ಆದ್ಮೇಲೆ ಗೆಳೆಯನ ಜತೆ ಗೋವಾಕ್ಕೆ ಹೋದೆ...'

suchetana

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿರುವ ಯುವತಿ ವಿಚಾರಣೆ ಸತತ ನಾಲ್ಕೂವರೆ ಗಂಟೆ ನಡೆಯಿತು. ಈ ಸಂದರ್ಭದಲ್ಲಿ ಯುವತಿ ತನಿಖಾಧಿಕಾರಿ ಕವಿತಾ ಅವರು ಕೇಳಿರುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾಳೆ.

ಬೆಂಗಳೂರಿನ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್​ನಲ್ಲಿ ವಿಚಾರಣೆ ನಡೆಸಿದ ಎಸ್​ಐಟಿ ಸತತ ನಾಲ್ಕುವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಬೆಳಗ್ಗೆ 10.30ರಿಂದ ವಿಚಾರಣೆ ಆರಂಭಗೊಂಡಿತ್ತು. ತನಿಖಾಧಿಕಾರಿ ಕವಿತಾ ನಾಲ್ಕೂವರೆ ಗಂಟೆ ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಯುವತಿಯನ್ನು ಗೌಪ್ಯ ಸ್ಥಳಕ್ಕೆ ಎಸ್ ಐ ಟಿ ತಂಡ ಕರೆಯೊಯ್ದಿದೆ.

ಈ ಸಂದರ್ಭದಲ್ಲಿ ನಡೆದಿರುವ ಪ್ರಶ್ನೋತ್ತರಗಳು ಹೀಗಿವೆ:

ಎಸ್ಐಟಿ : ನೀವು ಕಿಡ್ನಾಪ್ ಆಗಿದ್ರಾ..? ನಿಮ್ಮನ್ನು ಕಿಡ್ನಾಪ್ ಮಾಡಲಾಗಿತ್ತಾ?

ಯುವತಿ : ಇಲ್ಲ,ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ,ನಾನಾಗಿಯೇ ಹೋಗಿದ್ದೆ

ಎಸ್ಐಟಿ : ಮತ್ತೆ ನಿಮ್ಮ ಪೋಷಕರು ನಿಮ್ಮನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರಲ್ಲ

ಯುವತಿ : ಅವರು ಯಾರದ್ದೋ ಒತ್ತಡದ ಮೇಲೆ ಹೀಗೆ ದೂರು ನೀಡಿದ್ದಾರೆ

ಎಸ್ಐಟಿ : ನೀವು ಇಲ್ಲಿಂದ ಹೋದ ಮೇಲೆ ಕುಟುಂಬಸ್ಥರ ಸಂಪರ್ಕ ಮಾಡಿದ್ರಾ?

ಯುವತಿ :ಹೌದು ನನ್ನ ಗೆಳೆಯ ಆಕಾಶ್ ಫೋನ್ ನಿಂದ ಇಲ್ಲಿಂದ ಹೋದ ನಂತರ ಕೆಲವೊಮ್ಮೆ ಕರೆ ಮಾಡಿದ್ದೆ,ಆಮೇಲೆ ಅವರ ಸಂಪರ್ಕವನ್ನು ನಾನು ಮಾಡಿಲ್ಲ

ಎಸ್ಐಟಿ : ನಿಮ್ಮ‌ ಕುಟುಂಬಸ್ಥರು ಮತ್ತೆ ನೀವು ಕಿಡ್ನಾಪ್ ಆಗಿದ್ದೀರಾ ಅಂತಾನೆ ಹೇಳ್ತಿದ್ರಲ್ಲ

ಯುವತಿ :ಸಿಡಿ ಬಿಡುಗಡೆ ನಂತರ ಒಂದೆರಡು ದಿನ ಕರೆ ಮಾಡಿ ಮಾತಾಡಿದ್ದೆ,ನಂತರ ನಾನು ಕರೆ ಮಾಡಲಿಲ್ಲ,ಸ್ವಲ್ಪ ದಿನದ ಬಳಿಕ ಅವರ ಮೇಲೆ ಯಾರೊ ಒತ್ತಡ ಹಾಕಿ ದೂರು ಕೊಡಿಸಿದ್ದಾರೆ

ಎಸ್ಐಟಿ : ಕುಟುಂಬಸ್ಥರಿಗೂ ಸಂಪರ್ಕಿಸದೇ ಇದ್ದಕ್ಕಿದ್ದಂತೆ ಹೊರಟು ಹೋಗಿದ್ದು ಯಾಕೆ?

ಯುವತಿ: ನನ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿತು.ನನಗೆ ಭಯ ಆಯ್ತು.ಸಿಡಿ ಬಿಡುಗಡೆಯಿಂದ ಮನಸ್ಸಿಗೆ ತುಂಬಾನೇ ನೋವಾಯ್ತು ಹಾಗಾಗಿ ಯಾರ ಕಣ್ಣಿಗೂ ಬಿದ್ದಿಲ್ಲ.ಇಲ್ಲಿ ಇರೋದು ಬೇಡ ಎಂದು ನಿರ್ಧರಿಸಿ ನನ್ನ ಸ್ನೇಹಿತ ಆಕಾಶ್ ಜೊತೆ ಗೋವಾಗೆ ಹೋಗಿದ್ದೆ.ಅಲ್ಲಿಂದ ಬೇರೆ ರಾಜ್ಯಗಳಿಗೂ ತೆರಳಿದ್ದೆ

ಎಸ್ಐಟಿ : ಗೋವಾದಲ್ಲಿ ಹೋಗಿ ಎಲ್ಲಿ ಉಳಿದುಕೊಂಡಿದ್ರಿ?

ಯುವತಿ :ಗೋವಾದಲ್ಲಿ ನನ್ನ ಸ್ನೇಹಿತೆ ಮನೆ ಇದೆ ಅಲ್ಲಿ ಉಳಿದುಕೊಂಡಿದ್ದೆ

ಎಸ್ಐಟಿ : ಮತ್ತೆ ಅಲ್ಲಿಂದ ನಿಮ್ಮ ಊರಿಗಾದರು ಬರಬಹುದಿತ್ತಲ್ವಾ?

ಯುವತಿ :ವಿಡಿಯೋ ವೈರಲ್ ಆದ ಬಳಿಕ ನಾನು ಊರಿಗೆ ಹೋಗೊ ಸ್ಥತಿಯಲ್ಲಿ ಇರಲಿಲ್ಲ

ಎಸ್ಐಟಿ : ಯಾರಾದ್ರು ಬಂಧನದಲ್ಲಿ ನಿಮ್ಮನ್ನ ಇರಿಸಿದ್ರಾ? ನಿಮ್ಮ ತಂದೆ ತಾಯಿ ನಮ್ಮ ಮಗಳು ಬಂಧನದಲ್ಲಿದ್ದಾಳೆ ಎಂದಿದ್ದಾರೆ

ಯುವತಿ : ಇಲ್ಲ ಮೇಡಂ. ನನ್ನನ್ನು ಯಾರು ಬಂಧಿಸಿ ಇಟ್ಟಿರಲಿಲ್ಲ. ನಾನೇ ಕೆಲವರ ಸಹಾಯ ಕೇಳಿದ್ದೆ

ಎಸ್ಐಟಿ : ಕಣ್ಮರೆಯಾದ ಬಳಿ ಎರಡು ವಿಡಿಯೋ ರಿಲೀಸ್​ ಮಾಡಿದ್ರಲ್ಲ. ಅದನ್ನು ಯಾರಾದ್ರೂ ಒತ್ತಡ ಹಾಕಿ‌ ಮಾಡಿಸಿದ್ರಾ?

ಯುವತಿ : ಇಲ್ಲ,ನಾನೇ ಮಾಡಿದ್ದ ವಿಡಿಯೋ ಅದೆಲ್ಲ,ನನಗೆ ಯಾರ ಒತ್ತಡವು ಇರಲಿಲ್ಲ

ಎಸ್ಐಟಿ : ಅಜ್ಙಾತ ಸ್ಥಳದಿಂದ ವಿಡಿಯೋ ಮಾಡಿದ್ದು ಯಾಕೆ?ನೀವೆ ನೇರವಾಗಿ ಬರಬಹುದಿತ್ತಲ್ವಾ?

ಯುವತಿ : ರಮೇಶ್ ಜಾರಕಿಹೊಳಿ ದೂರು ದಾಖಲು ಮಾಡಿದ್ರಲ್ವಾ,ಅದರಲ್ಲಿ ನನ್ನನ್ನೂ ಕೂಡ ಅಪರಾಧಿ ಎಂಬಂತೆ ತೋರಿಸೊ ಯತ್ನ‌‌ ಮಾಡಲಾಯ್ತು ಹಾಗಾಗಿ ವಿಡಿಯೊ ಮೂಲಕ ಸ್ಪಷ್ಟನೆ ಕೊಡಬೇಕಾಯ್ತು

ಎಸ್ಐಟಿ : ನೀವು ಬೆಂಗಳೂರಿನಿಂದ ತೆರಳಿದಾಗ ಯಾರು ನಿಮ್ಮ ಜೊತೆಯಲ್ಲಿದ್ರು

ಯುವತಿ : ನನ್ನ ಸ್ನೇಹಿತ ಆಕಾಶ್ ಬಿಟ್ಟರೆ ನನ್ನ ಜತೆ ಯಾರು ಇರಲಿಲ್ಲ

ಎಸ್ಐಟಿ : ಇಷ್ಟು ದಿನಗಳ ಕಾಲ ಹಣಕಾಸಿನ ನೆರವು ಯಾರು ನೋಡಿಕೊಂಡರು..?

ಯುವತಿ : ನಾನೆ ನನ್ನ ದುಡ್ಡನ್ನೇ ತೆಗೆದುಕೊಂಡು ಹೋಗಿದ್ದೆ

ಎಸ್ಐಟಿ : ಇಷ್ಟು ದಿನ ಯಾಕೆ ನೀವು ಎಲ್ಲಿಯೂ‌ ಕಾಣಿಸಿಕೊಂಡಿಲ್ಲ?

ಯುವತಿ : ನನ್ನದೇ ವಿಡಿಯೋ ವೈರಲ್ ಆಗಿತ್ತು. ರಮೇಶ್ ಜಾರಕಿಹೊಳಿ ಅವರಿಂದ ಭಯ ಕೂಡ ಇತ್ತು. ಹಾಗಾಗಿ ನಾನು ಅಜ್ಙಾತ ಸ್ಥಳದಲ್ಲಿ ಇರುವ ಅನಿವಾರ್ಯತೆ ಎದುರಾಯ್ತು

ಎಸ್ಐಟಿ : ವಿಡಿಯೋ ಮಾತ್ರ ರೆಕಾರ್ಡ್ ಮಾಡ್ತಾ ಇದ್ರಿ, ರೆಕಾರ್ಡ್ ಮಾಡ್ತಾ ಇದ್ದಿದ್ದು ಯಾರು...?

ಯುವತಿ : ನನ್ನ ಸ್ನೇಹಿತರ ಮೂಲಕ ರೆಕಾರ್ಡ್ ಮಾಡಿಸ್ತಿದ್ದೆ. ಅವರು ಯಾರು ಅನ್ನೋದು ಬೇಡ. ಅವರಿಗೆ ತೊಂದರೆ ಆಗೋದು ಬೇಡ

ಎಸ್ಐಟಿ : ಹಾಗಾದ್ರೆ ನಿಮ್ಮನ್ನ ಯಾರು ಕಿಡ್ನಾಪ್ ಮಾಡಿಲ್ವಾ?

ಯುವತಿ : ಇಲ್ಲ ನಾನಾಗಿಯೇ ಹೋಗಿದ್ದು ಯಾರು ಕಿಡ್ನಾಪ್ ಮಾಡಿಲ್ಲ

ಎಸ್ಐಟಿ : ಸರಿ ಈಗ ನೀವು ತೆರಳಬಹುದು ಅಗತ್ಯ ಬಿದ್ದರೆ ವಿಚಾರಣೆಗೆ ಕರಿತಿವಿ ಬನ್ನಿ

ಯುವತಿ : ಸರಿ, ಯಾವಾಗ ಕರೆದರು ವಿಚಾರಣೆಗೆ ಬರುತ್ತೇನೆ. ನನಗೆ ನ್ಯಾಯ ಕೊಡಿಸಿ ಪ್ಲೀಸ್