ಜಿಲ್ಲೆ

VIDEO: ಕೋಲಾರದಲ್ಲಿ ಅನಾವರಣಗೊಂಡ ದೇಶದ ಅತಿದೊಡ್ಡ ಧ್ವಜ ಕಂಡು ಪುಳಕಿತರಾದ ಜನ- ಸೇನಾ ಹೆಲಿಕಾಪ್ಟರ್​ನಿಂದ ಪುಷ್ಪಾರ್ಚನೆ

ಕೋಲಾರ: ಕೋಲಾರದಲ್ಲಿ ತಯಾರಾದ ದೇಶದ ಅತಿದೊಡ್ಡ ತ್ರಿವರ್ಣ ಧ್ವಜ ಇಂದು ಇಲ್ಲಿಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅನಾವರಣಗೊಂಡಿತು. ಬೃಹತ್ ರಾಷ್ಟ್ರ ಧ್ವಜಕ್ಕೆ ಸೇನಾ ಹೆಲಿಕಾಪ್ಟರ್​ನಿಂದ ಪುಷ್ಪಾರ್ಚನೆ ನೆರವೇರಿಸಲಾಯಿತು.

ಈ ಬೃಹತ್​ ಬಾವುಟದ ಹಾರಾಟ ನೋಡಿದವರು ರೋಮಾಂಚನಗೊಂಡರು. ಭಾರಿ ಜನಸ್ತೋಮದ ನಡುವೆ ಇದನ್ನು ಅನಾವರಣಗೊಳಿಸಲಾಯಿತು.

1.30 ಲಕ್ಷ ಚದರಡಿಯ ಬೃಹತ್ ತ್ರಿವರ್ಣ ಧ್ವಜ ಇದಾಗಿದೆ. ಇದು 204 ಅಡಿ ಉದ್ದ ಹಾಗೂ 630 ಅಡಿ ಅಗಲ ಹೊಂದಿದೆ. 13 ಸಾವಿರ ಮೀಟರ್​ ಬಟ್ಟೆಯಲ್ಲಿ ಇದನ್ನು ತಯಾರಿಸಲಾಗಿದೆ. 7 ದಿನಗಳಲ್ಲಿ 25 ಜನರು ಸೇರಿ ಇದನ್ನು ರೆಡಿ ಮಾಡಿದ್ದಾರೆ. ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಇದನ್ನು ತಯಾರಿಸಲಾಗಿದೆ.

ಇದನ್ನು ಲಿಮ್ಕಾ ಬುಕ್​ ಆಫ್​ ರೆಕಾರ್ಡ್​ಗೂ ಸೇರಿಸಲಾಗುತ್ತಿದೆ. ಕೈಯಿಂದ ನಿರ್ಮಾಣ ಮಾಡಲಾಗಿರುವ ರಾಷ್ಟ್ರಧ್ವಜ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ. ಈ ಧ್ವಜ ಹಿಡಿದುಕೊಳ್ಳಲು 2000 ಜನರನ್ನು ನೇಮಿಸಲಾಗಿತ್ತು. (ದಿಗ್ವಿಜಯ ನ್ಯೂಸ್​)

ವಿಡಿಯೋ ಇಲ್ಲಿದೆ ನೋಡಿ: