ಜಿಲ್ಲೆ

VIDEO: ಮಾಸ್ಕ್​ ಇಲ್ಲ... ಅಂತರವೂ ಇಲ್ಲ... ಎಸಿ ರೂಂನಲ್ಲಿ 500 ಮಂದಿ! ಸಾಮಾನ್ಯರಿಗೆ ಮಾತ್ರ ರೂಲ್ಸಾ?

suchetana

ಬಳ್ಳಾರಿ: ನಿನ್ನೆಯಷ್ಟೇ ಕರೊನಾ ಟಫ್​ ರೂಲ್ಸ್​ ಮಾಡಿದೆ ಸರ್ಕಾರ. ಕಟ್ಟುನಿಟ್ಟಾಗಿ ಇದನ್ನು ಪಾಲನೆ ಮಾಡದೇ ಹೋದರೆ ಕಠಿಣ ಕ್ರಮ ತೆಗೆದುಕೊಳ್ಳಾಗುವುದು ಎಂದೂ ಹೇಳಿದೆ. ಆದರೆ ಅಚ್ಚರಿಯ ವಿಷಯ ಎಂದರೆ ಬಳ್ಳಾರಿಯಲ್ಲಿ ನಡೆಯುತ್ತಿರುವ ಬಿಜೆಪಿಯ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಇದ್ಯಾವುದೂ ನಿಯಮಗಳು ಪಾಲನೆ ಆಗದೇ ಇರುವುದು ಕಂಡುಬಂದಿದೆ.

ಇದರಿಂದ ಆಕ್ರೋಶಗೊಂಡಿರುವ ಜನತೆ, ಕರೊನಾ ರೂಲ್ಸ್ ಕೇವಲ ಸಾಮಾನ್ಯ ಜನರಿಗೆ ಮತ್ತು ಸಿನಿಮಾ ಮಂದಿಗೆ ಮಾತ್ರನಾ..? ಬಿಜೆಪಿ ಕಾರ್ಯಕ್ರಮ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕರೊನಾ ಬರೋದಿಲ್ವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೇ ಎಸಿ ಪಂಕ್ಷನ್​ ಹಾಲ್​ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, 500ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ. ಸಾಲದು ಎನ್ನುವುದಕ್ಕೆ ವೇದಿಕೆ ಮೇಲೆ ಕುಳಿತವರು ಸೇರಿದಂತೆ ಬಹುತೇಕ ಜನರು ಮಾಸ್ಕ್ ಹಾಕಿಕೊಂಡಿಲ್ಲ‌. ಸಾಮಾಜಿಕ ಅಂತರವೇ ಕಾಯ್ದುಕೊಂಡಿಲ್ಲ. ಇದು ಜನರನ್ನು ಆಕ್ರೋಶಕ್ಕೆ ತಳ್ಳಿದೆ.

ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಈ ಕಾರ್ಯಕ್ರಮ ನಡೆಯುತ್ತಿದ್ದು, ಯುವಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್, ಶಾಸಕ ಸೋಮಶೇಖರ ರೆಡ್ಡಿ ಸಂಸದ ದೇವೇಂದ್ರಪ್ಪ ಭಾಗಿಯಾಗಿದ್ದಾರೆ.