ಬಳ್ಳಾರಿ: ಹುಟ್ಟುಹಬ್ಬದ ಖುಷಿಯಲ್ಲಿದ್ದ ಬಳ್ಳಾರಿಯ ಕಾಂಗ್ರೆಸ್ ಮುಖಂಡ ನಾರಾ ಭರತ್ ರೆಡ್ಡಿ ಅವರಿಗೆ ಬಳ್ಳಾರಿ ನಗರ ಪಾಲಿಕೆ ದೊಡ್ಡ ಶಾಕ್ ನೀಡಿದೆ. ಇವರ ಹುಟ್ಟುಹಬ್ಬದ ಖುಷಿಯಲ್ಲಿ ಇವರ ಅಭಿಮಾನಿಗಳು ಊರಿನ ತುಂಬೆಲ್ಲಾ ಹಾಕಿದ್ದ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವು ಮಾಡಲಾಗಿದೆ.
ನಗರದ ವಿವಿಧೆಡೆ ಭರತ್ ರೆಡ್ಡಿ ಅಭಿಮಾನಿಗಳು ಬ್ಯಾನರ್ ಹಾಕಿದ್ದರು. ಆದರೆ ಇದಾಗಲೇ ಈ ರೀತಿ ಬ್ಯಾನರ್ ಅಳವಡಿಕೆ ಕಾನೂನುಬಾಹಿರ ಎಂದು ನ್ಯಾಯಾಲಯಗಳು ಕೂಡ ಹೇಳಿವೆ. ಬ್ಯಾನರ್, ಫ್ಲೆಕ್ಸ್‌ಗಳನ್ನು ಹಾಕಲೇಬೇಕು ಎಂದಿದ್ದರೆ ಮೊದಲಿಗೆ ಆಯಾ ಪಾಲಿಕೆ, ನಗರಸಭೆಗಳ ಅನುಮತಿ ಕಡ್ಡಾಯ ಎನ್ನುವುದು ನಿಯಮ. ಆದರೆ ರೆಡ್ಡಿ ಅವರ ಹುಟ್ಟುಹಬ್ಬಕ್ಕೆ ಪಾಲಿಕೆ ಅನುಮತಿ ಪಡೆಯದೇ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಅದಕ್ಕಾಗಿ ಎಲ್ಲವನ್ನೂ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪಾಲಿಕೆ ಹೇಳಿದೆ.
ಖುದ್ದು ಪಾಲಿಕೆ ಕಮೀಷನರ್ ಪ್ರೀತಿ ಗೆಹ್ಲೋಟ್ ಫೀಲ್ಡಿಗಿಳಿದು ಸಿಬ್ಬಂದಿ ಜತೆ ಕಾರ್ಯಾಚರಣೆ ನಡೆಸಿ ಬ್ಯಾನರ್ ತೆರವುಗೊಳಿಸಿದ್ದಾರೆ. ಏಕಾಏಕಿ ಬ್ಯಾನರ್ ತೆರವುಗೊಳಿಸುತ್ತಿರುವ ಕಾರಣ, ಭರತ್ ರೆಡ್ಡಿ ಬೆಂಬಲಿಗರಿಂದ ಆಕ್ರೋಶ ವ್ಯಕ್ತಪಡಿಸಿದರು. ಎಷ್ಟೇ ಮನವಿ ಮಾಡಿದ್ರೂ ಮಣಿಯದೆ ಮುಂದೆ ನಿಂತು ಎಲ್ಲಾ ಬ್ಯಾನರ್‌ಗಳನ್ನು ಆಯುಕ್ತೆ ತೆರವು ಮಾಡಿಸಿದ್ದಾರೆ.
ಇಲ್ಲಿ ನೋಡಿ ತೆರವು ಕಾರ್ಯಾಚರಣೆ ವಿಡಿಯೋ: