ಜಿಲ್ಲೆ

ಕೊಲೆ ಯತ್ನ: ಮಹಾನಗರ ಪಾಲಿಕೆ ಸದಸ್ಯೆ ಪತಿ, ಕಾಂಗ್ರೆಸ್ ಮುಖಂಡ ಸೀನ ಅರೆಸ್ಟ್

ಬಳ್ಳಾರಿ: ಖಾಲಿ ನಿವೇಶನ ತೆರವು ವಿಚಾರದಲ್ಲಿ ಕೊಲೆಗೆ ಯತ್ನ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿಯ ಕಾಂಗ್ರೆಸ್ ‌ಮುಖಂಡ ಬಿ.ಆರ್​.ಎಲ್  ಶ್ರೀನಿವಾಸ್ ಅಲಿಯಾಸ್ ಸೀನ ಅವರನ್ನು ಬಂಧಿಸಲಾಗಿದೆ.

ಬಿ.ಆರ್​.ಎಲ್  ಶ್ರೀನಿವಾಸ್ ಅವರು ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯೆಯ ಪತಿ. ಬಳ್ಳಾರಿ ಗ್ರಾಮೀಣ ಪ್ರದೇಶದ ಖಾಲಿ ನಿವೇಶನ ವಿಚಾರಕ್ಕೆ ಕೊಲೆಗೆ ಯತ್ನ ಹಿನ್ನೆಲೆ ಇವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬಳ್ಳಾರಿಯ ಗುಗ್ಗರಹಟ್ಟಿ ನಿವಾಸಿ ಕೆ ವೆಂಕಟೇಶ ಎಂಬುವರಿಂದ ಶ್ರೀನಿವಾಸ್​ ವಿರುದ್ಧ ದೂರು ದಾಖಲಾಗಿತ್ತು. ವೆಂಕಟೇಶ್​ ಅವರನ್ನು ಅಪಹರಿಸಿ ಕೊಲೆಗೆ ಯತ್ನ ಮಾಡಿರುವ ಆರೋಪ ಇದೆ. ನಿವೇಶನ ಖಾಲಿ ಮಾಡುವಂತೆ ಒತ್ತಾಯ ಮಾಡಿ, ಖಾಲಿ ಬಾಂಡ್ ಮೇಲೆ ಸಹಿ ಮಾಡಿಸಿಕೊಂಡಿರುವುದಾಗಿ ಹೇಳಲಾಗಿದೆ.

ಬಳ್ಳಾರಿ ಬ್ರೂಸ್ ಪೇಟ್ ಪೊಲೀಸರಿಂದ ಸೀನನ ಬಂಧನವಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.