ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ವಿವಿಧ ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಮಹಿಳೆಯರಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಗೌರವಧನದ ಆಧಾರದ ಮೇಲೆ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಹಾಯಕಿ ಹುದ್ದೆಗೆ ಅಂಗವಿಕಲರು ಅರ್ಹರಾಗಿರುವುದಿಲ್ಲ.
ಅಭ್ಯರ್ಥಿಗಳು ಜನನ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ (ತಹಸೀಲ್ದಾರ್ ಕಚೇರಿಯಿಂದ ಪಡೆದದ್ದು), ಜಾತಿ ಪ್ರಮಾಣ ಪತ್ರ, ವಿಧವಾ ಪ್ರಮಾಣ ಪತ್ರ, ಅಂಗವಿಕಲತೆ ಪ್ರಮಾಣ ಪತ್ರ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಆಗಿದ್ದರೆ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣಪತ್ರ, ವಿಚ್ಛೇದನ ಪ್ರಮಾಣ ಪತ್ರ, ದೇವದಾಸಿಯರ ಮಕ್ಕಳು ಎಂದು ಸರ್ಕಾರದಿಂದ ದೃಢೀಕರಿಸಿದ ಪ್ರಮಾಣಪತ್ರ, ಪರಿತ್ಯಕ್ತ ಎಂದು ಗ್ರಾಪಂನಿಂದ ನೀಡಿದ ಪತ್ರ, ಯೋಜನಾ ನಿರಾಶ್ರಿತರು ಎಂದು ತಹಸೀಲ್ದಾರ್ರಿಂದ ಪಡೆದ ಪತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬಹುದು. ಆಸಿಡ್ ದಾಳಿಗೆ ತುತ್ತಾದವರು, ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದವರಿಗೆ ಹಾಗೂ ಸ್ಥಳೀಯರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು. ಆನ್ಲೈನ್ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದ್ದು, ದಾಖಲೆಗಳು ಅಸ್ಪಷ್ಟವಾಗಿದ್ದರೆ ಅರ್ಜಿ ತಿರಸ್ಕರಿಸಲಾಗುವುದು.
ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ, ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿ, ಗರಿಷ್ಠ 9ನೇ ತರಗತಿ. ಕನ್ನಡ ಭಾಷೆ ಜ್ಞಾನ ಅವಶ್ಯ. ಕನಿಷ್ಠ 18ವರ್ಷ, ಗರಿಷ್ಠ 35 ವರ್ಷ. ಅಂಗವಿಕಲರಿಗೆ 10 ವರ್ಷ ವಯೋಸಡಿಲಿಕೆ ಇದೆ.
ಜಿಲ್ಲಾವಾರು ವಿವರ
* ಬೆಳಗಾವಿ - ಒಟ್ಟು 285
- ಅಂಗನವಾಡಿ ಕಾರ್ಯಕರ್ತೆ ಹುದ್ದೆ - 53
- ಅಂಗನವಾಡಿ ಸಹಾಯಕಿ ಹುದ್ದೆ - 232
+ ಯಾವ ತಾಲೂಕು?
ಬೆಳಗಾವಿ ಜಿಲ್ಲೆಯ ರಾಯಬಾಗ, ಚಿಕ್ಕೋಡಿ, ಬೈಲಹೊಂಗಲ, ಖಾನಾಪೂರ, ಅರಭಾವಿ, ಅಥಣಿ, ಗೋಕಾಕ, ಕಾಗವಾಡ, ನಿಪ್ಪಾಣಿ, ಸವದತ್ತಿ, ರಾಮದುರ್ಗ, ಹುಕ್ಕೇರಿ, ಬೆಳಗಾವಿ ಗ್ರಾಮಾಂತರ ಹಾಗೂ ಬೆಳಗಾವಿ ನಗರಗಳ ಅಂಗನವಾಡಿ ಕೇಂದ್ರಗಳಲ್ಲಿ ಉದ್ಯೋಗಾವಕಾಶವಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 14.8.2021
ಅಧಿಸೂಚನೆಗೆ: https://bit.ly/3rKSRpP
* ಧಾರವಾಡ- ಒಟ್ಟು 91
- ಅಂಗನವಾಡಿ ಕಾರ್ಯಕರ್ತೆ ಹುದ್ದೆ - 19
- ಅಂಗನವಾಡಿ ಸಹಾಯಕಿ ಹುದ್ದೆ - 72
+ ಯಾವ ತಾಲೂಕು?
ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳಿ-ಧಾರವಾಡ ನಗರ, ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕಿನಲ್ಲಿ ಉದ್ಯೋಗಾವಕಾಶಗಳಿವೆ.
ಅರ್ಜಿ ಸಲ್ಲಿಸಲು ಕೊನೇ ದಿನ: 15.8.2021
ಅಧಿಸೂಚನೆಗೆ: https://bit.ly/3je7s9i
ಗೌರವಧನ: ಕಾರ್ಯಕರ್ತೆಗೆ ಮಾಸಿಕ 10,000 ರೂ, ಸಹಾಯಕಿಯರಿಗೆ 5,000 ರೂ. ವೇತನ ನೀಡಲಾಗುತ್ತದೆ.
ಮಾಹಿತಿಗೆ: https://anganwadirecruit.kar.nic.in