ಜಿಲ್ಲೆ

PHOTOS: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ನಟಿ ತಾರಾ ವಿಶೇಷ ಫೋಟೋ ಶೂಟ್‌

suchetana

ಬೆಂಗಳೂರು: 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶ ಅದ್ಧೂರಿಯಾಗಿ ಅಚರಿಸಲು ಸಜ್ಜಾಗುತ್ತಿರುವ ಬೆನ್ನಲ್ಲೇ, ರಾಷ್ಟ್ರಪ್ರಶಸ್ತಿ ವಿಜೇತರಾದ ನಟಿ ತಾರಾ ಅನೂರಾಧ ಕೇಸರಿ - ಬಿಳಿ - ಹಸಿರು ಬಣ್ಣಗಳಲ್ಲಿ ಡಿಸೈನ್‌ ಮಾಡಿರುವ ಉಡುಪಿನಲ್ಲಿ ಫೋಟೋ ಶೂಟ್‌ ಮಾಡಿಸಿದ್ದಾರೆ.


ಪ್ರತಿಮಾ ಅವರು ಡಿಸೈನ್‌ ಮಾಡಿರುವ ಉಡುಪುಗಳಲ್ಲಿ ತಾರಾ ಮಿಂಚುತ್ತಿದ್ದಾರೆ.

ತಾರಾ ಅವರ ಮೇಕಪ್‌ ಮಾಡಿರುವುದು ಸಾಗರ್​ ಹಾಗೂ ಕೇಶವಿನ್ಯಾಸವನ್ನು ಮೇಘನಾ ಅವರು ಮಾಡಿದ್ದಾರೆ.

75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೇಶವನ್ನೇ ತ್ರಿವರ್ಣದ ಪ್ರತಿರೂಪವನ್ನಾಗಿಸುವ ಕಲ್ಪನೆಯನ್ನು ನಾಗರಿಕರಲ್ಲಿ ಬಿತ್ತಿದ್ದಾರೆ. ಹರ್‌ ಘರ್‌ ತಿರಂಗಾ ಅಭಿಯಾನದ ಮೂಲಕ ತ್ರಿವರ್ಣ ಧ್ವಜ ಜನ ಮನದಲ್ಲಿ ಸಾಕಾರಗೊಳಿಸುವಂತೆ ಮಾಡಿದ್ದಾರೆ. ಈ ಮಹತ್ವದ ಆಚರಣೆಯ ಸಂದರ್ಭದಲ್ಲಿ ವಿಶೇಷವಾದುದನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಫೋಟೋ ಶೂಟ್‌ ಮಾಡಿಸಿದ್ದೇನೆ ಎಂದು ತಾರಾ ಹೇಳಿದ್ದಾರೆ.