ಜಿಲ್ಲೆ

ಮದುವೆ ದಿಬ್ಬಣದ ವಾಹನ, ಕಾರಿನ ನಡುವೆ ಭೀಕರ ಅಪಘಾತ: ಕಾಂಗ್ರೆಸ್‌ ಮುಖಂಡನ ದುರ್ಮರಣ

suchetana

ಸಿದ್ದಾಪುರ (ಉತ್ತರ ಕನ್ನಡ): ಭೀಕರ ಅಪಘಾತದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತ್​ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಘಟಕ ಅಧ್ಯಕ್ಷರಾಗಿದ್ದ ಮಂಜುನಾಥ ಬಿ. ಗೌಡ ಕಬ್ಬಿನ್ಮನೆ ಮೃತಪಟ್ಟಿದ್ದಾರೆ.

ಮದುವೆ ದಿಬ್ಬಣದ ಜನರನ್ನು ಕರೆದೊಯ್ಯುತ್ತಿದ್ದ ವಾಹನ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮದುವೆ ಮುಗಿಸಿ ದಿಬ್ಬಣದ ಜನರು ಕಾರಿನಲ್ಲಿ ತೆರಳುತ್ತಿದ್ದರು. ಇದು ಎದುರುಗಡೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.