ಜಿಲ್ಲೆ

ರೇವತಗಾಂವದಲ್ಲಿ ಹಾಡಹಗಲೇ ಕಳ್ಳತನ

ರೇವತಗಾಂವ: ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 11 ರಿಂದ 12 ಗಂಟೆ ಸುಮಾರಿಗೆ ಮಲ್ಲಿಕಾರ್ಜುನ ಮೇತ್ರೆ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆ ಟ್ರೇಜರಿಯಲ್ಲಿದ್ದ 70 ಸಾವಿರ ರೂ.ಹಾಗೂ ಮೂರೂವರೆ ತೊಲ ಚಿನ್ನಾಭರಣವನ್ನು ಕಳ್ಳರು ಎಗರಿಸಿದ್ದಾರೆ.

ಮನೆಯವರೆಲ್ಲ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದಾಗ ಕಳ್ಳರು ಹಿಂಬಾಗಿಲ ಚಿಲಕ ಮುರಿದು ಕೈಚಳಕ ತೋರಿದ್ದಾರೆ. ಮನೆಯವರು ಮಧ್ಯಾಹ್ನ ಊಟಕ್ಕೆ ಬಂದಾಗ ಹಿಂಬಾಗಿಲ ಚಿಲಕ ಮುರಿದಿರುವುದನ್ನು ನೋಡಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ಸ್ಥಳಕ್ಕೆ ಚಡಚಣ ಪೊಲೀಸ್ ಠಾಣೆ ಪಿಎಸ್‌ಐ ಐ.ಎಂ. ದುಂಡಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.