ಬೆಂಗಳೂರು ಆರ್.ವಿ. ವಿಶ್ವವಿದ್ಯಾಲಯವು ಆಯೋಜಿಸಿರುವ 3ನೇ ವರ್ಷದ ಮಕ್ಕಳ ಚಿತ್ರೋತ್ಸವವಾದ ಟೀನ್ ಇಂಡಿ ಫಿಲ್ಮ್ ಅವಾರ್ಡ್-2024 (ಟಿಫಾ)ಗೆ ಮಂಗಳವಾರ ಚಾಲನೆ ದೊರೆಯಿತು.
ಚಿತ್ರೋತ್ಸವದಲ್ಲಿ 30ಕ್ಕೂ ರಾಷ್ಟ್ರಗಳ 300ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ 10ಕ್ಕೂ ಹೆಚ್ಚಿನ ಪ್ರಶಸ್ತಿ ಪುರಸ್ಕೃತ ಸಿನಿಮಾಗಳು 3 ಫೀಚರ್ಸ್ ಫಿಲ್ಸ್ಮ್ ಸೇರಿ ಹಲವು ಸಿನಿಮಾಗಳು ಮಾ.14ರಿಂದ 17ರ ವರೆಗೆ ಪ್ರದರ್ಶನಗೊಳ್ಳಲಿವೆ. ಆರ್.ವಿ. ವಿಶ್ವವಿದ್ಯಾಲಯದ ಮೈಸೂರು ರಸ್ತೆ ಕ್ಯಾಂಪಸ್ ಮತ್ತು ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಸಿನಿಮಾಗಳ ಪ್ರದರ್ಶನವಿರುತ್ತದೆ.
ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಮಂಗಳವಾರ ವಿವಿ ಕುಲಪತಿ ಡಾ. ವಿಎಸ್‌ಆರ್ ಮೂರ್ತಿ, ಕಲಾ ನಿರ್ದೇಶಕ ವಿದ್ಯಾಶಂಕರ್, ಚಿತ್ರೋತ್ಸವದ ನಿರ್ದೇಶಕ ಪವನ್ ಎಸ್. ರಾಜ್ ಹಾಗೂ ಆಯ್ಕೆ ಸಮಿತಿ ಸದಸ್ಯರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ವಿದ್ಯಾಶಂಕರ್, ಸಿನಿಮಾ ಎಂಬುದು ಸಮಕಾಲೀನ ಮಾಧ್ಯಮವಾಗಿದೆ. ಸಾಹಿತ್ಯ, ಸಂಗೀತದಂತೆಯೇ ಇಂದಿನ ಮಾಧ್ಯಮವಾಗಿದೆ. ಬೇರೆ ದೇಶಗಳಲ್ಲಿ ಜನ ಹೇಗೆ ಬದುಕುತ್ತಿದ್ದಾರೆ. ಅವರ ಸಮಸ್ಯೆಗಳು ಹಾಗೂ ಪರಿಹಾರಗಳನ್ನು ಸಿನಿಮಾಕ್ಕಿಂತ ಪ್ರಭಾವ ಬೀರುವ ಮತ್ತೊಂದು ಮಾಧ್ಯಮವಿಲ್ಲ ಎಂದು ಹೇಳಿದರು.
ಇದರ ಜತೆಗೆ ಮಕ್ಕಳಲ್ಲಿ ಸಿನಿಮಾ ಜಗತ್ತಿನ ಕೌಶಲವನ್ನು ಬೆಳೆಸಲು ಸಹಕಾರಿಯಾಗಲಿದೆ.
ಕೆಲವು ಸಿನಿಮಾಗಳನ್ನು ನೋಡಿದಾಗ ಮಕ್ಕಳ ಭೌತಿಕ ಮಟ್ಟ ಕೂಡ ಉನ್ನತ ಸ್ಥಾನದಲ್ಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಮಕ್ಕಳು ಯಾವ ರೀತಿಯ ಸಿನಿಮಾಗಳನ್ನು ಮಾಡಬಹುದು ಎಂಬುದರ ಸೂಚನೆಯಾಗಿವೆ ಎಂದು ಹೇಳಿದರು.
ನೋಂದಣಿ 250 ರೂ. ನಿಗದಿ
ಮಾ.14ರಿಮದ 17ರ ವರೆಎ ಪ್ರತಿ ದಿನ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸಿನಿಮಾಗಳನ್ನು ನೋಡುವ ಆಸಕ್ತರು 250 ರೂ.ಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬಹುದು.