ಜಿಲ್ಲೆ

ಕ್ಷೇತ್ರಗಳಲ್ಲಿ ಭಕ್ತ ಸಾಗರ

Dakshina Kannada

ಸುಬ್ರಹ್ಮಣ್ಯ/ಕಿನ್ನಿಗೋಳಿ: ಕರಾವಳಿಯ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ಭಕ್ತ ಸಂದಣಿ ಕಂಡುಬಂತು.

ಸರಣಿ ರಜಾ ದಿನಗಳ ಕಾರಣದಿಂದ ಶನಿವಾರ ಸಾಯಂಕಾಲದಿಂದಲೇ ಕ್ಷೇತ್ರಗಳಲ್ಲಿ ಭಕ್ತಸಾಗರ ಕಂಡುಬಂದಿತ್ತು. ವಸತಿಗೃಹಗಳು ತುಂಬಿತ್ತು. ಪಾರ್ಕಿಂಗ್ ಸ್ಥಳಗಳು ವಾಹನಗಳಿಂದ ಭರ್ತಿಯಾಗಿದ್ದವು. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಾನುವಾರ ಷಣ್ಮುಖ ಪ್ರಸಾದ ಭೋಜನಶಾಲೆಯಲ್ಲಿ ಮಧ್ಯಾಹ್ನ 10 ಸಾವಿರ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಹಾಳೆತಟ್ಟೆ ಮೂಲಕ ಬಫೆ ಮಾದರಿಯಲ್ಲಿ ಅನ್ನಪ್ರಸಾದ ವಿತರಿಸಲಾಯಿತು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭಾನುವಾರ ಸಾವಿರಾರು ಭಕ್ತರು ಭೇಟಿ ನೀಡಿದರು. ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇದ್ದ ಕಾರಣ ಎರಡೂ ದಿನಗಳಲ್ಲಿ ಭಕ್ತರ ಸಂಖ್ಯೆ ಎಂದಿಗಿಂತ ಹೆಚ್ಚಿತ್ತು. ಭಾನುವಾರ 10 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದರು. ದೇವಳದಲ್ಲಿ ಎಲ್ಲ ಸೇವೆಗಳು ಪುನರಾರಂಭವಾಗಿಛಿ. ಒಂದೇ ಸುತ್ತು ಪ್ರದಕ್ಷಿಣೆಗೆ ಅವಕಾಶವಿದ್ದು, ಸರ್ಕಾರ ಆದೇಶದ ಪ್ರಕಾರ ಭಕ್ತರಿಗೆ ತೀರ್ಥ ನೀಡಲಾಗುತ್ತಿಲ್ಲ.