ಜಿಲ್ಲೆ

ಪಡಿತರ ಕಾರ್ಡ್ ತಿದ್ದುಪಡಿಗೆ ನೂಕುನುಗ್ಗಲು

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಹೊಸ ಪಡಿತರ ಚೀಟಿ ಹಾಗೂ ತಿದ್ದುಪಡಿ ಪ್ರಕ್ರಿಯೆಗೆ 2 ದಿನ ಅವಕಾಶ ಕಲ್ಪಿಸಿದ್ದರಿಂದ ಅವಕಾಶ ಸದುಪಯೋಗಕ್ಕಾಗಿ ಸಾಕಷ್ಟು ಜನರು ಇಡೀದಿನ ಕಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಪಂಚಗ್ಯಾರಂಟಿ ಯೋಜನೆಗಳಿಂದಾಗಿ ರೇಷನ್ ಕಾರ್ಡ್‌ಗೆ ಸಾಕಷ್ಟು ಬೇಡಿಕೆ ಬಂದಿದೆ. ಕಾರ್ಡ್ ಇಲ್ಲದವರು ಹೊಸ ಕಾರ್ಡ್, ತಿದ್ದುಪಡಿಗಾಗಿ ಕಾಯುತ್ತಿದ್ದಾರೆ. ಜು.2, 3ರಂದು ಕೇವಲ 2ಗಂಟೆ ಮಾತ್ರ ಕರ್ನಾಟಕ ಒನ್, ಗ್ರಾಮ್ ಒನ್ ಕೇಂದ್ರಗಳಲ್ಲಿ ಹೊಸ ಅರ್ಜಿ, ಹೆಸರು ಸೇರ್ಪಡೆ, ಸದಸ್ಯರ ಹೆಸರು ಡಿಲೀಟ್, ಇ-ಕೆವೈಸಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸರ್ವರ್ ಸಮಸ್ಯೆಯಿಂದ ಜನರು ಯಾತನೆ ಅನುಭವಿಸಿದರು.
ಈ ಕುರಿತು ತಹಸೀಲ್ದಾರ್ ವಾಸುದೇವಸ್ವಾಮಿ ಪ್ರತಿಕ್ರಿಯಿಸಿ, ಎರಡು ದಿನ ತುರ್ತು ವೈದ್ಯಕೀಯ ಕಾರಣಗಳಿಗೆ ಮಾತ್ರ ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಅರ್ಜಿಗೆ ಅವಕಾಶ ನೀಡಲಾಗಿದೆ. ಸರ್ವರ್ ಸಮಸ್ಯೆಯಿಂದ ಒಂದೆರಡು ಅರ್ಜಿ ಮಾತ್ರ ಸ್ವೀಕಾರವಾಗಿವೆ. ಈ ಸಮಸ್ಯೆ ರಾಜ್ಯಾದ್ಯಂತ ಇದೆ. ತಪ್ಪು ಮಾಹಿತಿಯಿಂದ ಜನರು ಸೇವಾ ಕೇಂದ್ರಕ್ಕೆ ಮುಗಿಬಿದ್ದಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.