ವಿವಿಧ ಶಾಲೆಗಳಿಂದ ಬಂದಿದ್ದ ಲಗೋರಿ ತಂಡ. 
ಜಿಲ್ಲೆ

ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸುವುದು ಅಗತ್ಯ

ಎಂ.ರವಿ

ಶನಿವಾರಸಂತೆ: ಮುಂದಿನ ಪೀಳಿಗೆಗಾಗಿ ಗ್ರಾಮೀಣ ಭಾಗದ ಲಗೋರಿ ಕ್ರೀಡೆಯನ್ನು ಈಗಿನ ಪೀಳಿಗೆಯವರು ಪರಿಚಯಿಸುವ ಮೂಲಕ ಗ್ರಾಮೀಣ ಕ್ರೀಡೆಯನ್ನು ಪ್ರೋತ್ಸಾಹಿಸುವ ಅಗತ್ಯ ಇದೆ ಎಂದು ಆಲೂರು ಸಿದ್ದಾಪುರದ ಸೈನಿಕ ವೈ.ಜೆ.ರೂಪೇಶ್ ಅಭಿಪ್ರಾಯ ಪಟ್ಟರು.

ಆಲೂರು ಸಿದ್ದಾಪುರ ಸಾಯಿ ಎಜುಕೇಷನ್ ಟ್ರಷ್ಟಿನ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯ 18ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಆಟದ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಅಂತರ ಶಾಲಾ ಮಟ್ಟದ ಲಗೋರಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಈಗಿನ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳ ಬಗ್ಗೆ ಅರಿವು ಇಲ್ಲದಿರುವ ನಿಟ್ಟಿನಲ್ಲಿ ಹಿಂದೆ ಗ್ರಾಮೀಣ ಭಾಗದಲ್ಲಿ ಎಲ್ಲರೂ ಆಡುತ್ತಿದ್ದ ಲಗೋರಿಯಂತಹ ಕ್ರೀಡೆಯನ್ನು ಈಗಿನ ಮಕ್ಕಳಿಗೆ ಪರಿಚಯಿಸುವುದರಿಂದ ಮುಂದಿನ ಪೀಳಿಗೆಗೆ ಲಗೋರಿಯು ಉತ್ತಮ ಗ್ರಾಮೀಣ ಕ್ರೀಡೆಯಾಗುತ್ತದೆ. ಗ್ರಾಮೀಣ ಸೊಗಡು, ಸಂಸ್ಕೃತಿಯಂತೆ ಲಗೋರಿ ವಿಶಿಷ್ಟವಾಗಿದ್ದು ಈ ನಿಟ್ಟಿನಲ್ಲಿ ಜಾನಕಿ ಕಾಳಪ್ಪ ಶಾಲೆ ವತಿಯಿಂದ ಲಗೋರಿ ಕ್ರೀಡೆಯನ್ನು ಅಂತರ ಶಾಲಾ ಮಟ್ಟದಲ್ಲಿ ಹಮ್ಮಿಕೊಂಡು ಒತ್ತು ಕೊಡುತ್ತಿರುವ ಶಾಲೆಯ ಟ್ರಷ್ಟಿ ಶಿವಪ್ರಕಾಶ್ ಅವರ ಚಿಂತನೆ ಶ್ಲಾಘನಿಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾನಕಿ ಕಾಳಪ್ಪ ಶಾಲೆಯ ಮ್ಯಾನೆಜಿಂಗ್ ಟ್ರಷ್ಟಿ ಎಚ್.ಕೆ.ಶಿವಪ್ರಕಾಶ್ ಮಾತನಾಡಿ, ಗ್ರಾಮೀಣ ಕ್ರೀಡೆಗೆ ಆದ್ಯತೆ ನೀಡುವ ಉದ್ದೇಶದಿಂದ ನಮ್ಮ ಶಾಲೆ ವತಿಯಿಂದ ಒಂದೆರೆಡು ವರ್ಷ ಸ್ಥಳೀಯ ಮಟ್ಟದಲ್ಲಿ ಲಗೋರಿ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೆವು. ಇದೀಗ ಎಲ್ಲ್ಲರಿಗೂ ಲಗೋರಿ ಪರಿಚಯಿಸುವ ಉದ್ದೇಶದಿಂದ ಅಂತರ ಶಾಲಾ ಮಟ್ಟದಲ್ಲಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪಾಲಕರ ಸಮಿತಿ ಪ್ರಮುಖರಾದ ಸಿ.ಎಂ.ಹೇಮಂತ್, ಪ್ರವೀಣ್, ಸುಚೀಂದ್ರ, ತೇಜಸ್ವಿ, ವಸಂತ್, ಶಾಲಾ ಮುಖ್ಯ ಶಿಕ್ಷಕಿ ಸರಿತಾ ಶಿವಪ್ರಕಾಶ್, ಗ್ರಾಪಂ ಸದಸ್ಯ ಮಲ್ಲಪ್ಪ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಸಹನಾ, ಅಂಕನಹಳ್ಳಿ ಶಾಲಾ ಶಿಕ್ಷಕರಾದ ಮೇರಿ, ವಿಜಯಲಕ್ಷ್ಮೀ ಮುಂತಾದವರು ಹಾಜರಿದ್ದರು.

ಲಗೋರಿ ಪಂದ್ಯಾವಳಿಯಲ್ಲಿ ವಿವಿಧ ಶಾಲೆಗಳಿಂದ 10 ತಂಡಗಳು ಭಾಗವಹಿಸಿದ್ದವು. ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಮಾಜಿ ಸೈನಿಕ ಸುಚೀಂದ್ರ ಪಂದ್ಯಾವಳಿ ನಡೆಸಿಕೊಟ್ಟರು. ಆಲೂರು ಸಿದ್ದಾಪುರ ಸಾಯಿ ಎಜುಕೇಷನ್ ಟ್ರಷ್ಟಿನ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯ 18ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಆಟದ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರ ಶಾಲಾ ಮಟ್ಟದ ಲಗೋರಿ ಕ್ರೀಡೆಯನ್ನು ಸೈನಿಕ ರೂಪೇಶ್ ಉದ್ಘಾಟಿಸಿದರು. ಸಿ.ಎಂ.ಹೇಮಂತ್, ಪ್ರವೀಣ್, ಸುಚೀಂದ್ರ, ತೇಜಸ್ವಿ, ವಸಂತ್, ಸರಿತಾ ಶಿವಪ್ರಕಾಶ್, ಮಲ್ಲಪ್ಪ ಇತರರಿದ್ದರು.