ಮೂಡಲಗಿ ಸಮೀಪದ ರಂಗಾಪುರ ಗ್ರಾಮದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಸನತ್ ಜಾರಕಿಹೊಳಿ ಉದ್ಘಾಟಿಸಿದರು. ಯಲ್ಲಾಲಿಂಗ ವಾಳದ, ಚಂದ್ರಕಾಂತ ಮೊಟೆಪ್ಪಗೋಳ, ಮಹಾದೇವ ಅಕಡಿ ಇತರರು ಇದ್ದರು. 
ಜಿಲ್ಲೆ

ಗ್ರಾಮೀಣ ಕ್ರೀಡೆ ಕಬಡ್ಡಿಗೆ ಪ್ರೋತ್ಸಾಹದ ಅವಶ್ಯಕತೆಯಿದೆ

ಮೂಡಲಗಿ: ಗ್ರಾಮೀಣ ಕ್ರೀಡೆ ಕಬಡ್ಡಿ ಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆಯಿದ್ದು, ಸಹಕಾರ ನೀಡುವಲ್ಲಿ ಎಲ್ಲರೂ ಮುಂದಾಗಬೇಕು ಎಂದು ಲಕ್ಷ್ಮೀ ಎಜ್ಯೂಕೇಷನ್ ಟ್ರಸ್ಟ್ ನಿರ್ದೇಶಕ ಸನತ್ ಜಾರಕಿಹೊಳಿ ಹೇಳಿದ್ದಾರೆ.

ಸಮೀಪದ ರಂಗಾಪುರ ಗ್ರಾಮದ ಭಾಗ್ಯವಂತಿ ದೇವಿ ಜಾತ್ರೆಯ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಯಲ್ಲಾಲಿಂಗ ವಾಳದ, ಶಿಕ್ಷಕ ಚಂದ್ರಕಾಂತ ಮೊಟೆಪ್ಪಗೋಳ, ಸಿದ್ದಣ್ಣ ದುರದುಂಡಿ ಮಾತನಾಡಿದರು. ಪ್ರಭಾ ಶುಗರ ನಿರ್ದೇಶಕ ಮಲ್ಲಿಕಾರ್ಜುನ ಕಬ್ಬೂರ, ಹನುಮಂತ ತೇರದಾಳ, ಬಸವರಾಜ ಮನಗೂಳಿ, ಮಹಾದೇವ ಮಸರಗುಪ್ಪಿ, ಮೀರಾಸಾಬ್ ನದಾಫ್, ಮಂಜು ಕಬ್ಬೂರ, ಯಮನಪ್ಪ ಅಕಡಿ, ಹನುಮಂತ ಸೈದಾಪೂರ, ಮಹಾದೇವ ಅಕಡಿ ಇತರರು ಇದ್ದರು.