ಶಿರೂರು ರೈತಸಂಘದ ವತಿಯಿಂದ ಗ್ರಾಮೀಣ ಕ್ರೀಡೆಗಳಿಗೆ ಚಾಲನೆ ನೀಡಲಾಯಿತು. ರೈತಸಂಘ ಅಧ್ಯಕ್ಷ ಹೊಸ್ಮನೆ ರವೀಂದ್ರ ಶೆಟ್ಟಿ, ಉಪಾಧ್ಯಕ್ಷ ವೆಂಕ್ಟು ಪೂಜಾರಿ ಕಾಳನಮನೆ, ಶಿರೂರು ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಸಾಧನ್‌ದಾಸ್ ದುಬೈ ಮತ್ತಿತರರು ಇದ್ದರು.  
ಜಿಲ್ಲೆ

ಶಿರೂರಿನಲ್ಲಿ ಗ್ರಾಮೀಣ ಕ್ರೀಡಾ ಸಂಭ್ರಮ

ಬೈಂದೂರು: ಹೊಸ್ತು ಕುಂದಾಪುರ ಭಾಗದ ರೈತರ ಪ್ರಮುಖ ಹಬ್ಬ. ಹಲವು ವರ್ಷಗಳ ಹಿಂದೆ ಈ ದಿನದಂದು ಸೋಡಿಬೆಟ್ಟಿನಲ್ಲಿ ಕುಸ್ತಿ ಪಂದ್ಯಾಟ ನಡೆಯುತ್ತಿತ್ತು. ಕಾಲಕ್ರಮೇಣ ಈ ಕ್ರೀಡೆ ನಿಂತು ಹೋಗಿತ್ತು. ಈ ವರ್ಷ ಶಿರೂರು ರೈತಸಂಘದ ವತಿಯಿಂದ ಮರೆಯಾದ ಗ್ರಾಮೀಣ ಕ್ರೀಡೆಗಳನ್ನು ಯುವ ತಲೆಮಾರುಗಳಿಗೆ ಪರಿಚಯಿಸುವ ಉದ್ದೇಶದಿಂದ ಗುರುವಾರ ಕರಾವಳಿಯಲ್ಲಿ ಗ್ರಾಮೀಣ ಕ್ರೀಡಾ ಸಂಭ್ರಮ ಆಯೋಜಿಸಲಾಗಿತ್ತು. ವಿವಿಧ ಕಡೆಯಿಂದ ನೂರಾರು ರೈತರು ಭಾಗವಹಿಸಿದ್ದರು.

ಶಿರೂರು ರೈತಸಂಘ ಅಧ್ಯಕ್ಷ ಹೊಸ್ಮನೆ ರವೀಂದ್ರ ಶೆಟ್ಟಿ, ಉಪಾಧ್ಯಕ್ಷ ವೆಂಕ್ಟು ಪೂಜಾರಿ ಕಾಳನಮನೆ, ಶಿರೂರು ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಸಾಧನ್‌ದಾಸ್ ದುಬೈ, ಯಕ್ಷಸಂಪದ ಅಧ್ಯಕ್ಷ ಚಿಕ್ಕು ಪೂಜಾರಿ, ತಾಪಂ ಮಾಜಿ ಸದಸ್ಯ ಪುಷ್ಪರಾಜ ಶೆಟ್ಟಿ, ಗಂಗಾಧರ ದಾಸ್, ರೈತಸಂಘದ ಕಿಶೋರ ಪೂಜಾರಿ, ಕುಂದಾಪುರ ಆರಕ್ಷಕ ಇಲಾಖೆಯ ಮೋಹನ ಪೂಜಾರಿ ಶಿರೂರು ಇದ್ದರು. ಕುಸ್ತಿ, ಕಬಡ್ಡಿ, ಕುಡಿಕೆ ಒಡೆಯುವುದು, ಹಗ್ಗಜಗ್ಗಾಟ, ಕಾಯಿಕಲ್ಲು ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು ನಡೆಯಿತು.