ಜಿಲ್ಲೆ

ತೊಂಭತ್ತುಮನೆಯಲ್ಲಿ ಗ್ರಾಮೀಣ ಕ್ರೀಡಾಕೂಟ : ವಿಜೇತರಿಗೆ ಬಹುಮಾನ ವಿತರಣೆ

ಮಡಿಕೇರಿ: ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮಡಿಕೇರಿ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಮಡಿಕೇರಿ, ಜಿಲ್ಲಾ ಯುವ ಒಕ್ಕೂಟ ಕೊಡಗು ಜಿಲ್ಲೆ, ತಾಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಾಕತ್ತೂರು ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ವತಿಯಿಂದ ಗ್ರಾಮೀಣ ಕ್ರೀಡಾಕೂಟ ನಡೆಯಿತು.


ತೊಂಭತ್ತುಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂಜೆ ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಪಿ.ಪಿ.ಸುಕುಮಾರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಹಾಕತ್ತೂರು ಗ್ರಾ.ಪಂ ಅಧ್ಯಕ್ಷ ಬಿ.ಕೆ.ಯತೀಶ್, ಸದಸ್ಯರಾದ ಹೆಚ್.ಟಿ.ಕಿರಣ, ಶೈನಿ, ತೊಂಭತ್ತುಮನೆ ಶಾಲಾಭಿವೃದ್ಧಿ ಹಾಗೂ ಮೇಲಸ್ತುವಾರಿ ಸಮಿತಿ ಅಧ್ಯಕ್ಷ ಕೆ.ವೈ.ಜಲೀಲ್, ತೊಂಭತ್ತುಮನೆ ತ್ರೀನೇತ್ರ ಯುವಕ ಸಂಘದ ಸಲಹೆಗಾರ ಎ.ಕೆ.ನಾಗೇಶ್ ನಾಯ್ಡ, ಕ್ರೀಡಾಕೂಟದ ಅನ್ನದಾನಿ ಬಿ.ಎ.ಮೊಹಮ್ಮದ್ ಅಲಿ ಹಾಜರಿದ್ದರು.


ವಿಜೇತರ ವಿವರ: ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ನಡೆದ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಲಿವಿನ್ ಮೋಹನ್(ಪ್ರ), ದಿವಿನ್ ಸುನಿಲ್(ದ್ವಿ), ಸಾಮ್ರಾಟ್ ಹರೀಶ್ ರೈ ತೃತೀಯ ಬಹುಮಾನವನ್ನು ಪಡೆದುಕೊಂಡರು. ೧ ರಿಂದ ೩ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ವಿಷದ ಚೆಂಡು ಸ್ಪರ್ಧೆಯಲ್ಲಿ ಭುವನ್ ರಂಜನ್ (ಪ್ರ), ರಾಬಿನ್ ಜಾನ್(ದ್ವಿ), ಮಾನ್ವಿಕ ರಮೇಶ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.


೪ನೇ ತರಗತಿಯಿಂದ ೫ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ೧೦೦ ಮೀ. ಓಟದ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಫಹಾದ್(ಪ್ರ), ಫಹೀಮ್(ದ್ವಿ), ಹಫೀರ್(ತೃ) ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿರ ವಿಭಾಗದಲ್ಲಿ ಶಮ್ನಾ(ಪ್ರ), ಜಾಗೃತಿ(ದ್ವಿ), ಇಶಾನ ತೃತೀಯ ಸ್ಥಾನ ಪಡೆದುಕೊಂಡರು.


ಸಾರ್ವಜನಿಕ ಮಹಿಳೆಯರ ಸೂಜಿ ನೂಲಿನ ಓಟದ ಸ್ಪರ್ಧೆಯಲ್ಲಿ ಭವ್ಯ(ಪ್ರ), ಹುಸೈರಾ(ದ್ವಿ), ಸೌಮ್ಯ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಾರ್ವನಿಕ ಪುರುಷರ ಗೋಣಿಚೀಲದ ಓಟದ ಸ್ಪರ್ಧೆಯಲ್ಲಿ ಸೈನು(ಪ್ರ), ದಯಾನಂದ(ದ್ವಿ), ಸಾದಾತ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.


ಸಾರ್ವಜನಿಕ ಪುರುಷರ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಪವನ್(ಪ್ರ), ರಾಜೇಶ್(ದ್ವಿ), ಮಹಮ್ಮದ್ ಅಲಿ ತೃತೀಯ ಬಹುಮಾನ ಪಡೆದುಕೊಂಡಿದ್ದು, ಸಾರ್ವಜನಿಕ ದಂಪತಿ ಓಟದ ಸ್ಪರ್ಧೆಯಲ್ಲಿ ಧನುಕುಮಾರ್-ಸಜನಿ ದಂಪತಿ(ಪ್ರ), ಶರೀಫ್-ಹುಸೈರಾ ದಂಪತಿ (ದ್ವಿ), ದೇವಿ ಪ್ರಸಾದ್-ದಿವ್ಯ ದಂಪತಿ ತೃತೀಯ ಬಹುಮಾನ ಪಡೆದುಕೊಂಡರು.


ಸಾರ್ವಜನಿಕ ಪುರುಷರ ರಸ್ತೆ ಓಟದ ಸ್ಪರ್ಧೆಯಲ್ಲಿ ಧನುಕುಮಾರ್(ಪ್ರ) ಇಸ್ಮಾಯಿಲ್(ದ್ವಿ), ನವೀನ್ (ತೃ), ಮಹಿಳೆಯ ವಿಭಾಗದಲ್ಲಿ ಸೌಮ್ಯ ಚೂರಿಕಾಡು(ಪ್ರ), ಗೀತಾ(ದ್ವಿ), ಪ್ರಮೀಳಾ ಸುರೇಶ್ ತೃತೀಯ ಬಹುಮಾನ ಪಡೆದುಕೊಂಡರು.


ಸಾರ್ವಜನಿಕ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಿ.ವೈ.ಸಿ ಚೂರಿಕಾಡು(ಪ್ರ), ತೋಭತ್ತುಮನೆ ಗರ್ಲ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ತೊಂಭತ್ತುಮನೆ ವಿನಾಯಕ ದೇವಾಲಯ ಸಮಿತಿ ಪ್ರಥಮ, ತೊಂಭತ್ತುಮನೆ ವಿಲೇಜ್ ಬಾಯ್ಸ ದ್ವಿತೀಯ ಸ್ಥಾನ ಪಡೆದುಕೊಂಡಿತು.