ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಧರಗಡ್ಡೆ ತಂಡದ ಸದಸ್ಯರಿಗೆ ನಗರ ಯೋಜನಾ ಸಹಾಯಕ ನಿರ್ದೇಶಕ ವಿ.ಮಾರುತಿ ಬಹುಮಾನ ವಿತರಿಸಿದರು. ತಾಪಂ ಮಾಜಿ ಸದಸ್ಯ ವಿ.ಬಸವರಾಜ್, ಗ್ರಾಪಂ ಸದಸ್ಯರಾದ ಎರ‌್ರಿಸ್ವಾಮಿ, ಕಾಗಿ ಶೇಖಣ್ಣ, ಅಡ್ಡೆ ಶಿವಪ್ಪ, ಎಚ್.ಮಲ್ಲೇಶಪ್ಪ ಇದ್ದರು. 
ಜಿಲ್ಲೆ

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

ಕುರುಗೋಡು: ಒತ್ತಡ ಬದುಕಿನ ನಡುವೆ ಮನಸ್ಸು ಮತ್ತು ದೇಹದ ಚೈತನ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನಗರ ಯೋಜನಾ ಸಹಾಯಕ ನಿರ್ದೇಶಕ ವಿ.ಮಾರುತಿ ತಿಳಿಸಿದರು.

ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಬೈರತಿ ಸುರೇಶ್ ಅಭಿಮಾನಿ ಬಳಗ ಹಾಗೂ ಮಾರುತಿ ಕ್ರಿಕೆಟ್ ಕ್ಲಬ್‌ನಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕ್ರೀಡಾಸಕ್ತಿ ಕುಸಿಯುತ್ತಿದ್ದು, ಪ್ರೋತ್ಸಾಹಿಸಬೇಕು.

ಕ್ರೀಡೆ ಜೀವನದ ಭಾಗವಾಗಿದ್ದು, ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುತ್ತವೆ. ನೀತಿ, ನಿಯಮ, ಸಂವಹನೆಯೊಂದಿಗೆ ಶಿಸ್ತಿನ ಅರಿವು ಮೂಡಿಸುತ್ತವೆ. ಕ್ರೀಡೆಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೆಚ್ಚಿಸುತ್ತವೆ. ಒತ್ತಡದ ಜೀವನದಿಂದ ಹೊರಬರಲು ಸಾಧ್ಯ ಎಂದರು.

ತಾಪಂ ಮಾಜಿ ಸದಸ್ಯ ವಿ.ಬಸವರಾಜ್, ಗ್ರಾಪಂ ಸದಸ್ಯರಾದ ಎರ‌್ರಿಸ್ವಾಮಿ, ಕಾಗಿ ಶೇಖಣ್ಣ, ಅಡ್ಡೆ ಶಿವಪ್ಪ, ಎಚ್.ಮಲ್ಲೇಶಪ್ಪ, ಪ್ರಮುಖರಾದ ಹನುಮಂತರೆಡ್ಡಿ, ಎನ್.ಈರಣ್ಣ, ಕಡ್ಲೆ ಈರಣ್ಣ, ಮೇಟಿ ಬಸವರಾಜ, ಎನ್.ನಾಗರಾಜ್, ಎನ್.ಎರ‌್ರಿಸ್ವಾಮಿ, ಹರೀಶ್, ದೊಡ್ಡಬಸವ, ಮೇಘರಾಜ ಇತರರಿದ್ದರು.

ಪಂದ್ಯಾವಳಿಯಲ್ಲಿ 55 ತಂಡಗಳು ಭಾಗವಹಿಸಿದ್ದು, ಪ್ರಥಮ ಸ್ಥಾನ ಶ್ರೀಧರಗಡ್ಡೆ, ದ್ವಿತೀಯ ಸ್ಥಾನ ಕಲ್ಲುಕಂಬ ಜೂನಿಯರ್ಸ್, ತೃತೀಯ ಸ್ಥಾನ ಕಲ್ಲುಕಂಬ ಸೀನಿಯರ್ಸ್ ತಂಡ ಪಡೆದವು.