ನವಲಕಲ್ ಗ್ರಾಮದಲ್ಲಿ ಎತ್ತಿನ ಗಿರ್ಕಿ ಬಂಡಿ ಎಳೆಯುವ ಸ್ಪರ್ಧೆಗೆ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯರು ಚಾಲನೆ ನೀಡಿದರು. 
ಜಿಲ್ಲೆ

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

ಸಿರವಾರ: ತಾಲೂಕಿನ ನವಲಕಲ್ ಗ್ರಾಮದಲ್ಲಿ ಗುರುಶಾಂತಲಿಂಗೇಶ್ವರ ಶಿವಾಚಾರ್ಯರ ಜಾತ್ರೋತ್ಸವ ಅಂಗವಾಗಿ ಎತ್ತಿನ ಗಿರ್ಕಿ ಬಂಡಿ ಎಳೆಯುವ ಸ್ಪರ್ಧೆ ಶನಿವಾರ ಆಯೋಜಿಸಲಾಗಿತ್ತು.

ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯರು ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಭಾಗದ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ಎತ್ತಿನ ಗಿರ್ಕಿ ಬಂಡಿ ಎಳೆಯುವ ಸ್ಪರ್ಧೆ, ಬಾರದ ಕಲ್ಲು ಎಳೆಯುವ ಸ್ಪರ್ಧೆ ಸೇರಿ ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.

ಬಂಡಿ ಎಳೆಯುವ ಸ್ಪರ್ಧೆಯಲ್ಲಿ ಕಿಚ್ಚ ಬಾಯ್ಸ ನವಲಕಲ್(ಪ್ರಥಮ), ದೇವರಾಜ ಅಕಳಕುಪ್ಪಿ (ದ್ವಿತೀಯ), ಎನ್.ಜಿ.ಕಿಚ್ಚ ನಾಯಕ ನವಲಕಲ್(ತೃತೀಯ), ಅಮರೇಶ ನಾಯಕ, ಬಸವರಾಜ ನಾಯಕ, ಬಸ್ಸಪ್ಪ ಇಳಗೇರ ಆಕಳಕುಂಪಿ ಅವರು ಕ್ರಮವಾಗಿ ನಾಲ್ಕು, ಐದು, ಆರನೇ ಸ್ಥಾನ ಪಡೆದುಕೊಂಡರು.