ಜಿಲ್ಲೆ

ಗ್ರಾಮನೈರ್ಮಲ್ಕಕ್ಕೆ ಸಿಗಲಿ ಆದ್ಯತೆ

ರವಿ ಎಸ್. ಬಳೂಟಗಿ

ನರಗುಂದ: ಗ್ರಾಮೀಣ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡಬೇಕಾದರೆ ಪ್ರತಿಯೊಂದು ಮನೆಗಳಲ್ಲಿಯೂ ಕಡ್ಡಾಯವಾಗಿ ಶೌಚಗೃಹ ನಿರ್ಮಿಸಿಕೊಳ್ಳಬೇಕು. ಸ್ವಚ್ಛ ಭಾರತ್, ನರೇಗಾ ಯೋಜನೆಯಡಿ ಪ್ರತಿ ಮನೆಗೆ ಶೌಚಗೃಹ ನಿರ್ಮಾಣಕ್ಕೆ ಗ್ರಾಪಂ ಕ್ರಮ ಕೈಗೊಳ್ಳುತ್ತಿದೆ. ಇದರ ಸದುಯೋಗ ಪಡೆದುಕೊಂಡು ಗ್ರಾಮವನ್ನು ಸ್ವಚ್ಛತೆಯಡೆಗೆ ಕೊಂಡೊಯ್ಯಬೇಕು ಎಂದು ತಾಪಂ ಎಸ್.ಕೆ. ಇನಾಮದಾರ ಹೇಳಿದರು.
ಜಿಪಂ ಗದಗ, ತಾಪಂ, ಕಣಕೀಕೊಪ್ಪ ಗ್ರಾಪಂ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕಣಕೀಕೊಪ್ಪ ಗ್ರಾಮದ ಎನ್.ಸಿ.ಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಅಗತ್ಯಕ್ಕೆ ತಕ್ಕಷ್ಟೇ ಮಾತ್ರ ನೀರನ್ನು ಬಳಕೆ ಮಾಡಬೇಕು. ಅಗತ್ಯ ಮೀರಿ ನೀರನ್ನು ಬಳಕೆ ಮಾಡಿ ಪೋಲು ಮಾಡಿ ಹರಿಬಿಡುವುದರಿಂದ ಗ್ರಾಮದ ವಾತಾವರಣ ಮಲಿನತೆಗೆ ಕಾರಣವಾಗುತ್ತದೆ ಎಂದರು.
ಕೃಷ್ಣಮ್ಮ ಹಾದಿಮನಿ, ಅಂಗನವಾಡಿ ಕಾರ್ಯಕರ್ತೆ ಶಾರದಾ ಹಳೇಮನಿ, ಸಮುದಾಯ ಆರೋಗ್ಯಾಧಿಕಾರಿ ರವಿ ವಾಲ್ಮೀಕಿ ಮಾತನಾಡಿದರು. ಅಧ್ಯಕ್ಷತೆಯನ್ನು ಅಧ್ಯಕ್ಷ ರಮೇಶಗೌಡ ರಾಯನಗೌಡ್ರ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಎಸ್.ಪಿ. ಹಿರೇಮನಿ, ಗ್ರಾ.ಪಂ ಉಪಾಧ್ಯಕ್ಷೆ ಎಸ್.ಎ. ಬಡಿಗೇರ, ಸದಸ್ಯರಾದ ಎಂ,ಎಸ್. ದೊಡಮನಿ, ಕನಕರೆಡ್ಡಿ ಗಿರಡ್ಡಿ, ವೆಂಕಮ್ಮ ಮಾದರ, ಭಾಗವಹಿಸಿದ್ದರು.